ರಾಹುಲ್ ಗಾಂಧಿ ಅರೇ ಹುಚ್ಚಾ -ಯತ್ನಾಳ ವಿವಾದಾತ್ಮಕ ಹೇಳಿಕೆ

ಹುಬ್ಬಳ್ಳಿ:  ಅಖಿಲ್ ಭಾರತೀಯ ಕಾಂಗ್ರೆಸ್ ಸಮಿತಿ ವರಿಷ್ಠ ರಾಹುಲ್ ಗಾಂಧಿಯನ್ನ  ಹುಚ್ಚ ಅಲ್ಲಾ ಅರೇ ಹುಚ್ಚ ಅಂತಾನೇ ಕರೆಯಬೇಕು ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಂ. ಆರ್ ಪಾಟೀಲ್ ಅವರ ನಿವಾಸದಲ್ಲಿ ಮಾಧ್ಯಮ ಪ್ರತಿಗಳ ಜೊತೆ ಅವರು ಮಾತನಾಡಿದರು.

ಕಾಂಗ್ರೆಸ್ ನವರು ಆಲೂಗಡ್ಡೆಯಿಂದ ಚಿನ್ನ ತೆಗೆಯತ್ತೇವೆ ಎನ್ನುತ್ತಾರೆ, ಚೀನಾ ರಾಯಭಾರಿ ಜೊತೆಗೆ ಸಭೆ ಮಾಡುತ್ತಾರೆ,

ದೇಶ ವಿರೋಧಿಗಳ ಜೊತೆಗೆ ಕೈಜೋಡಿಸತ್ತಾರೆ ಎಂದು ಕಿಡಿಕಾರಿದರು.

ನೀವೆ ಹೇಳಿ ಹೀಗಿದ್ದಾಗ  ರಾಹುಲ್ ಗಾಂಧಿಯವರನ್ನು ದೊಡ್ಡ ಬುದ್ದಿವಂತ ಎನ್ನಬೇಕಾ, ಹುಚ್ಚ ಅಲ್ಲಾ ಅರೇ ಹುಚ್ಚ ಅಂತ ಕರೆಯಬೇಕು ತಾನೆ ಎಂದರು.

ಎಐಸಿಸಿ ನಾಯಕಿ ಸೋನಿಯಾಗಾಂಧಿ ವಿಷ ಕನ್ಯೆ ಹೇಳಿಕೆಯನ್ನ ಈ‌ ವೇಳೆ ಯತ್ನಾಳ್ ಸಮರ್ಥನೆ ಮಾಡಿಕೊಂಡರು.

ವಿದೇಶದಿಂದ ಬಂದ ಸೋನಿಯಾ ವಿಷ ಕನ್ಯೆಯಾ ಅಂತ ಪ್ರಶ್ನಿಸಿದ್ದೆ ಆದರೆ ಮಾಧ್ಯಮಗಳು ಪ್ರಶ್ನಾರ್ಥಕ ಚಿಹ್ನೆಯನ್ನೇ ತೆಗೆದುಬಿಟ್ಟಿವೆ ಎಂದು ಹೇಳಿದರು.

ಕಾಂಗ್ರೆಸ್ ನವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ 99 ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ

ಹೀಗಿರುವಾಗ ನಾನು ಸೋನಿಯಾಗಾಂಧಿ ಬಗ್ಗೆ ಪ್ರಶ್ನಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಸಹ ಸಾಕಷ್ಟು ಲಿಂಗಾಯತ ಸಮುದಾಯದ ಕುರಿತು ಮಾತನಾಡುತ್ತಾರೆ ದಮ್ಮು, ತಾಕತ್ ಇದ್ರೆ ಜಗದೀಶ್ ಶೆಟ್ಟರ್ ರನ್ನ ಸಿಎಂ ಅಭ್ಯರ್ಥಿ ಅಂತ ಘೋಷಿಸಲಿ‌ ಎಂದು ಬಸವನಗೌಡ ಪಾಟೀಲ್ ಯತ್ನಾಳ್  ಸವಾಲು ಹಾಕಿದರು.