ಮೈಸೂರು: ಸಿದ್ಧರಾಮಯ್ಯ ಅವರಿಗೆ ಸೋಲಿನ ಭಯ ಶುರುವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಖಂಡಿತಾ ಸಿದ್ದರಾಮಯ್ಯ ಅಭಿವೃದ್ದಿ ಮಾಡುವುದಿಲ್ಲ ಓಡಿ ಹೋಗ್ತಾರೆ.ಆದ್ದರಿಂದ ವಿ.ಸೋಮಣ್ಣ ಅವರಿಗೆ ಹೆಚ್ಚು ಮತ ನೀಡಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ವರುಣಾ ಕ್ಷೇತ್ರದಲ್ಲಿ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ, ಕರ್ನಾಟಕವನ್ನು ಅಭಿವೃದ್ದಿ ಮತ್ತು ಸುರಕ್ಷಿತ ರಾಜ್ಯ ಮಾಡುವ ಏಕೈಕ ವ್ಯಕ್ತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರೆ ಪಿ ಎಫ್ ಐ ನಿಷೇಧವನ್ನು ಹಿಂಪಡೆಯುತ್ತಾರೆ. ಕಾಂಗ್ರೆಸ್ ರಾಜ್ಯವನ್ನು ಎಟಿಎಂ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಬಿಜೆಪಿ ಬಿ.ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದೆ.
ಆದರೆ ಸಿದ್ದರಾಮಯ್ಯ ಅವರು ಲಿಂಗಾಯತರು ಭಷ್ಟಾಚಾರಿಗಳು ಎನ್ನುವ ಮೂಲಕ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯಗೆ ಸೋಲಿನ ಭಯ ಶುರುವಾಗಿದೆ. ಚಾಮುಂಡೇಶ್ವರಿ, ವರುಣ, ಬಾದಾಮಿ ಕ್ಷೇತ್ರ ಪ್ರತಿ ಚುನಾವಣೆಯಲ್ಲೂ ಒಂದೊಂದು ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂದು ಶಾ ವ್ಯಂಗ್ಯ ವಾಡಿದರು.
ವರುಣಾ ಮತದಾರರೇ ನಿವೃತ್ತಿ ಹೊಂದುವ ನಾಯಕ ಬೇಕಾ ಅಥವಾ ಭವಿಷ್ಯದ ಬಗ್ಗೆ ಯೋಚಿಸುವ ನಾಯಕ ಬೇಕಾ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ, ಸಿದ್ದರಾಮಯ್ಯಗೆ ಮತ ನೀಡಬೇಡಿ ಎಂದು ಕರೆ ಕೊಟ್ಟರು.
ವಿ ಸೋಮಣ್ಣ ಅವರನ್ನು ಗೆಲ್ಲಿಸಿದರೆ ವರುಣಾವನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾರೆ.ಅವರಹ ಅತಿ ಹೆಚ್ಚು ಮತಗಳಿಂದ ಗೆಲ್ಲಬೇಕು ಎಂದು ಅಮುತ್ ಶಾ ಹೇಳಿದರು.
ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಅಭ್ಯರ್ಥಿ ವಿ.ಸೋಮಣ್ಣ,ಸಂಸದ ಪ್ರತಾಪ್ ಸಿಂಹ, ನಟ ಶಶಿಕುಮಾರ್ ಮತ್ತಿತರರು ಹಾಜರಿದ್ದರು.