ಕಾಂಗ್ರೆಸ್ ಅಭ್ಯರ್ಥಿ ಸಹೋದರನ ಮನೆ ಮೇಲೆ ಐಟಿ ದಾಳಿ

ಮೈಸೂರು:‌ ಚುನಾವಣೆಸಂದರ್ಭದಲ್ಲೇ ಕಾಂಗ್ರೆಸ್ ಅಭ್ಯರ್ಥಿಯ ಸಹೋದರನ ಮನೆ ಮೇಲೆ ಐಟಿ ದಾಳಿ ನಡೆದಿದ್ದು ಪಕ್ಷದ ನಾಯಕರಿಗೆ ತಲೆಬಿಸಿ ತಂದಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಅಭ್ಯರ್ಥಿ ಅಶೋಕ್ ಕುಮಾರ್ ರೈ ಸೋದರ ಸುಬ್ರಹ್ಮಣ್ಯ ರೈ.

ಮೈಸೂರಿನ ಕೆ.ಸುಬ್ರಹ್ಮಣ್ಯ ರೈ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಹಣ ವಶಪಡಿಸಿಕೊಂಡಿದ್ದಾರೆ.

ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಾಕ್ಸ್ ಗಳನ್ನು ಕತ್ತರಿಯಿಂದ ಕತ್ತರಿಸಿ  1 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮಾವಿನ ಹಣ್ಣಿನ ಬಾಕ್ಸ್ ಗಳಲ್ಲಿ ಹಣವನ್ನು ಬಚ್ಚಿಟ್ಟು ಮನೆಯಲ್ಲಿಡಲಾಗಿತ್ತು.