ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ -ಬಿಎಸ್ ವೈ ವಿಶ್ವಾಸ

ಮೈಸೂರು: ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಬಿ.ಎನ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಕೃಷ್ಣರಾಜ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯದ ಸಭೆ‌ ನಡೆಸಿ  ಯಡಿಯೂರಪ್ಪ ಮಾತನಾಡಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ ಅವರಿಗೆ ವೀರಶೈವ ಲಿಂಗಾಯತ ಸಮುದಾಯ ಪೂರ್ಣಪ್ರಮಾಣದಲ್ಲಿ ಮತಚಲಾಯಿಸಿ  ಅತಿಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ  ಮನವಿ ಮಾಡಿದರು.

ಅನ್ಯಪಕ್ಷಗಳ ಮಾತಿಗೆ ಹಾಗೂ ಯಾವುದೇ ವದಂತಿಗಳಿಗೆ ವೀರಶೈವ ಸಮಾಜ ಕಿವಿಕೊಡಬಾರದು ಎಂದು ಹೇಳಿದರು.

ತಮ್ಮೊಂದಿಗೆ ಉತ್ತಮ ಒಡನಾಟದಲ್ಲಿರುವ ಇನ್ನಿತರ ಕ್ಷೇತ್ರದ ವೀರಶೈವರು ಶ್ರೀವತ್ಸ ಪರವಾಗಿ ಮತಯಾಚನೆ ಮಾಡಬೇಕು ಎಂದು ತಿಳಿಸಿದರು.

ಈ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡೇಮಾಡುತ್ತೇವೆ ಎಂದು ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ರವರೊಂದಿಗೆ  ಮಾತನಾಡಿ ತಿಳಿಸಿದ್ದೇನೆ.

ಹಾಗಾಗಿ ರಾಜ್ಯದೆಲ್ಲಡೆ ಪ್ರವಾಸ ಮಾಡುತ್ತಿದ್ದೇನೆ,ನಮ್ಮ ಪಕ್ಷದ ಅಭ್ಯರ್ಥಿ ಟಿ.ಎಸ್ ಶ್ರೀವತ್ಸ ರವರಿಗೆ ಸಂಪೂರ್ಣ ಆಶೀರ್ವಾದ ಮಾಡಿದ್ದೇನೆ ವೀರಶೈವರು ಹೆಚ್ಚಿನ ಸಂಖ್ಯೆಯಲ್ಲಿ  ಮತಚಲಾಯಿಸಬೇಕು ಎಂದು ಕರೆ ನೀಡಿದರು.

ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಟಿ ಎಸ್ ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ವೀರಶೈವ ಸಮುದಾಯದ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ಕೆ ಎನ್ ಪುಟ್ಟಬುದ್ದಿ, ಯು. ಎಸ್ ಶೇಖರ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ, ಕಾಪು ಸಿದ್ದಲಿಂಗ ಸ್ವಾಮಿ, ಮಾಜಿ ಮಹಾಪೌರರಾದ ಸುನಂದ ಪಾಲನೆತ್ರ, ನಗರಪಾಲಿಕೆ ಸದಸ್ಯರಾದ ಬಿ ವಿ ಮಂಜುನಾಥ್, ಜಗದೀಶ್, ಕೇಬಲ್ ಮಹೇಶ್, ನಿರಂಜನ್ ಮೂರ್ತಿ, ಜಯಶಂಕರ್ , ಜೀವದಾರ ಗಿರೀಶ್, ಪುಟ್ಟರಾಜಪ್ಪ, ಸಂತೋಷ್ ಕುಮಾರ್, ಪ್ರಕಾಶ್ ಪಟೇಲ್, ಜಯ ಗೌಡ, ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.