ಬಾಂಬೆ ಟಿಫಾನಿಸ್ ಮೇಲೆ ಐಟಿ ದಾಳಿ

ಮೈಸೂರು: ಸಿಹಿತಿಂಡಿಗಳ ತಯಾರಿಕಾ ಕ್ಷೇತ್ರದಲ್ಲಿ ಹೆಸರಾಗಿರುವ ಬಾಂಬೆ ಟಿಫಾನಿಸ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಅನಿಲ್ ಎಂಬುವರ ಮಾಲೀಕತ್ವದಲ್ಲಿರುವ ಬಾಂಬೆ ಟಿಫಾನಿಸ್ ಮೇಲೆ ದಾಳಿ ನಡೆದಿದೆ.

ಯಾದವಗಿರಿಯಲ್ಲಿರುವ ನಿವಾಸ ಹಾಗೂ ಆರ್.ಟಿ.ಒ.ಕಚೇರಿ ಬಳಿ ಇರುವ ನಿವಾಸಗಳ ಮೇಲೂ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮುಂಜಾನೆ 5 ಗಂಟೆ ವೇಳೆಗೆ 20 ಕ್ಕೂ ಹೆಚ್ಚು ಅಧಿಕಾರಿಗಳಳ್ಳ ಐಟಿ ತಂಡ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ದೇವರಾಜ ಅರಸು ರಸ್ತೆ, ಸಿದ್ದಾರ್ಥನಗರ ಹಾಗೂ ಜೆಪಿ ನಗರದಲ್ಲಿರುವ ಶಾಖೆಗಳು ಹಾಗೂ ತಯಾರಿಕಾ ಘಟಕದ ಮೇಲೂ ದಾಳಿ ನಡೆದಿದೆ.