ಮೈಸೂರು: ಈಭಾರಿ 20 ಸಾವಿರಕ್ಕೂ ಅಧಿಕ ಮತಗಳಿಂದ ಶ್ರೀವತ್ಸ ಅವರನ್ನ ಗೆಲ್ಲಿಸಲು ಕೃಷ್ಣರಾಜ ಕ್ಷೇತ್ರದ ಮತದಾರರು ಮುಂದಾಗಬೇಕು ಎಂದು ಬಿಜೆಪಿ ಮುಖಂಡ ಹೆಚ್. ವಿ ರಾಜೀವ್ ಕರೆ ನೀಡಿದರು.
ಮೈಸೂರಿನ ಚಾಮುಂಡಿಪುರಂನಲ್ಲಿರುವ ಶಾರದನಿಕೇತನದಲ್ಲಿ ವಿಪ್ರ ಮಹಿಳಾಸಂಗಮ ಆಯೋಜಿಸಿದ್ದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯ ಹಾಗೂ ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶಂಕರ, ರಾಮಾನುಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕೃಷ್ಣರಾಜ ಕ್ಷೇತ್ರದಲ್ಲಿ ವಿಪ್ರರು ಸರಿಸಮಾರು 70ಸಾವಿರಕ್ಕೂ ಅಧಿಕ ಮಂದಿಯಿದ್ದು ಈಭಾರಿ ದಾಖಲೆ ಪ್ರಮಾಣದಲ್ಲಿ ವಿಪ್ರ ಸಮುದಾಯ ಮತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಬಿಜೆಪಿಯ ಸಾಮನ್ಯ ಕಾರ್ಯಕರ್ತರಾಗಿ ಬೂತ್ ಮಟ್ಟದಿಂದ ಬೆಳೆದಿರುವ ಟಿ.ಎಸ್. ಶ್ರೀವತ್ಸ ರವರು ಪಕ್ಷದ ಚಟುವಟಿಕೆ ಸೇರಿದಂತೆ ರಾಜ್ಯದಲ್ಲಿ ಸರ್ಕಾರ ಆಡಳಿತವಿದ್ದಾಗ ಹಲವಾರು ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮಾತನಾಡಿ ಮತದಾನ ಪ್ರತಿಯೊಬ್ಬರ ಹಕ್ಕು, ಕೃಷ್ಣರಾಜ ಕ್ಷೇತ್ರ ಭಾರತದಲ್ಲೇ ವಿಪ್ರರು ಹೆಚ್ಚಿರುವ ಕ್ಷೇತ್ರ ಈ ಭಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಶ್ರೀವತ್ಸರವರಿಗೆ ವಿಪ್ರರು ಮತನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು
ಬಿಜೆಪಿ ಅಭ್ಯರ್ಥಿ ಟಿ. ಎಸ್. ಶ್ರೀವತ್ಸ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ. ಟಿ ಪ್ರಕಾಶ್, ವಿಪ್ರ ಮುಖಂಡರಾದ ನಂ ಶ್ರೀಕಾಂತ್ ಕುಮಾರ್ , ಕೆ ರಘುರಾಮ್ ವಾಜಪೇಯಿ, ನಗರಪಾಲಿಕೆ ಸದಸ್ಯರಾದ ಮಾವಿ ರಾಮಪ್ರಸಾದ್, ಗೋಪಾಲ್ ರಾವ್, ಎಂ ಆರ್ ಬಾಲಕೃಷ್ಣ, ಸುಂದರೇಶನ್,ನಗರಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ. ಲಕ್ಷ್ಮಿ, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್ ಉಪಸ್ಥಿತರಿದ್ದರು.