ಎಲ್ಲ ಸಮುದಾಯಗಳ ಪ್ರಗತಿಗೆ ಆದ್ಯತೆ -ಶ್ರೀವತ್ಸ

ಮೈಸೂರು: ಮೈಸೂರಿನ ಅಶೋಕಪುರಂನಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಟಿ. ಎಸ್. ಶ್ರೀವತ್ಸ ಪ್ರಚಾರ ನಡೆಸಿ ಮತಯಾಚಿಸಿದರು

ಸಬಕಾ ಸಾಥ್‌, ಸಬ್ ಕಾ ವಿಕಾಸ್ ಎಂಬ ಧೇಯ ವಾಕ್ಯದೊಂದಿಗೆ ದೇಶದ ಎಲ್ಲ ಸಮಾಜದವರ ಸಮಗ್ರ ಪ್ರಗತಿ ಬಿಜೆಪಿಯ ಮೂಲ ಗುರಿಯಾಗಿದೆ ಎಂದು ಈ‌ ವೇಳೆ ಟಿ.ಎಸ್ ಶ್ರೀವತ್ಸ ಹೇಳಿದರು.

ನಾನು ಕೂಡಾ ಎಲ್ಲಾ ಸಮುದಾಯಗಳ ಪ್ರಗತಿಗೆ ಮೊದಲ ಆದ್ಯತೆಯಲ್ಲಿ ಶ್ರಮಿಸುತ್ತೇನೆ,ತಮಗೆ ಮತದಾರರು ಆಶೀರ್ವಾದ ನೀಡಬೇಕೆಂದು ಅವರು ಕೋರಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ಗ್ರಾಮೀಣ ಭಾಗದ ನಾಗರಿಕರ ಜೀವನ ಮಟ್ಟ ಸುಧಾರಣೆ ಮಾಡುವತ್ತ ವಿನೂತನ ಯೋಜನೆಗಳು ರೂಪಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಚುನಾವಣೆ ಪ್ರಚಾರ ಪ್ರಾರಂಭಿಸುವ ಮುನ್ನ ಬಾಬಾ ಸಾಹೇಬ್ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಶ್ರೀವತ್ಸ ಮಾಲಾರ್ಪಣೆ ಮಾಡಿದರು.

ನಗಾರಿ ಬಾರಿಸುವ ಮೂಲಕ ಪಾದಯಾತ್ರೆ ಕೈಗೊಂಡು ಮತದಾರರ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಈ ವೇಳೆ‌ ಅಶೋಕಪುರಂನ ನಾಗರಿಕರು ಶ್ರೀವತ್ಸರನ್ನು  ಸ್ವಾಗತಿಸಿದರು.

ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ನಗರಪಾಲಿಕೆ ಸದಸ್ಯರಾದ ಪಿ. ಟಿ ಕೃಷ್ಣ, ಸಿ. ಈಶ್ವರ್, ಮೂಡ ಮಾಜಿ ಸದಸ್ಯ ವಿಶ್ವ, ಮಾಜಿ ಉಪ ಮಹಾಪೌರ ಶಲೇಂದ್ರ, ಎಸ್ ಸಿ ಮೋರ್ಚ ನಗರ ಉಪಾಧ್ಯಕ್ಷ ನಾಗರಾಜ್ ಬೆಲ್ಲಯ್ಯ, ಎಸ್ ಸಿ ಮೋರ್ಚಾ ನಗರ ಉಪಾಧ್ಯಕ್ಷ ಸತ್ಯ ಪ್ರಕಾಶ್, ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಧೀರಜ್ ಪ್ರಸಾದ್, ಮಿರ್ಲೆ ಶ್ರೀನಿವಾಸ್ ಗೌಡ  ಮತ್ತಿತರರು ಭಾಗವಹಿಸಿದ್ದರು.