ಮಕ್ಕಳು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ಬೆಳೆದರೆ ಸಮಾಜಕ್ಕೆ ಆಸ್ತಿ

ಮೈಸೂರು: ಮಕ್ಕಳು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ಬೆಳೆದರೆ ಮಾತ್ರ ಅವರು ನಮ್ಮ ಸಮಾಜಕ್ಕೆ ಆಸ್ತಿಯಾಗಲು ಸಾಧ್ಯ ಎಂದು ಪವರ್ ಫುಲ್ ಮೈಂಡ್ ನ ವಿದ್ಯಾರ್ಥಿ ಸಲಹೆಗಾರ್ತಿ ಬಿ.ಎಲ್.  ವೇಧಪ್ರದ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಭಾನುವಾರ 7 ನೆ ತಾರೀಖು ಪೋಷಕರ ಕಾರ್ಯಗಾರವನ್ನು ಪವರ್ ಫುಲ್ ಮೈಂಡ್ ವತಿಯಿಂದ ಏರ್ಪಡಿಸಲಾಗಿದೆ ಎಂದು ಹೇಳಿದರು.

ಪೋಷಕರ ಕಾರ್ಯಗಾರವು ಲರ್ನರ್ಸ್ ಗ್ಲೋಬಲ್ ಸ್ಕೂಲ್, ಸಿಎ ಸೈಟ್ ನಂಬರ್ 1, ಹಂಚ್ಯಾ ಮುಖ್ಯರಸ್ತೆ, ಸಾತಗಳ್ಳಿ, ಎರಡನೇ ಹಂತ, ಮೈಸೂರು. ಈ ವಿಳಾಸದಲ್ಲಿ ಮೇ 7ರಂದು ಬೆಳೆಗೆ 10:30 ರಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ ಎಂದು ಅವರು ತಿಳಿಸಿದರು.

ಕಾರ್ಯಗಾರದಲ್ಲಿ ಭಾಗವಹಿಸಲು ನೋಂದಣಿಗಾಗಿ ವಾಟ್ಸಾಪ್ ಅಥವಾ ಎಸ್ಎಮ್ಎಸ್ ಮೂಲಕ ಮೊಬೈಲ್ ಸಂಖ್ಯೆ 9880792079 ಹಾಗೂ 9632602672 ಸಂಪರ್ಕಿಸಬಹುದು ಎಂದು ವೇದಪ್ರದ ತಿಳಿಸಿದರು.

ಪೋಷಕರ ಕಾರ್ಯಾಗಾರದಲ್ಲಿ ಲರ್ನಸ್ ಗ್ಲೋಬಲ್ ಸ್ಕೂಲ್ ಸ್ಥಾಪಕ ಮುರಳಿ ಹಾಗೂ ಮಾಧವಿ ಅವರು ಭಾಗವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ ಮಕ್ಕಳ ಪಾಲನೆ, ಆರೋಗ್ಯ, ನಡವಳಿಕೆ, ವಿದ್ಯಾಭ್ಯಾಸ ಕೊಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ.

ಪೋಷಕರ ಹಾಗೂ ಮಕ್ಕಳ ಕೋಪವನ್ನು ನಿಯಂತ್ರಿಸುವುದು ಹಾಗೂ ಭಾವನಾತ್ಮಕ ಸಂಬಂಧ ಸರಿಪಡಿಸುವುದು ಮತ್ತು ಪೋಷಕರ ಸಂಬಂಧ, ಒತ್ತಡದಿಂದ ಆಗುವ ಪರಿಣಾಮಗಳನ್ನು ತಿಳಿಸಿಕೊಡಲಾಗುತ್ತದೆ.

ಮಕ್ಕಳು ಸುಳ್ಳು ಹೇಳುವುದಕ್ಕೆ ಹಾಗೂ ಕಡಿಮೆ ಅಂಕ ಗಳಿಕೆಗೆ ಕಾರಣವೇನು ಎಂಬುದರ ಬಗ್ಗೆ ಚರ್ಚಿಸಲಾಗುತ್ತದೆ.

ಮಕ್ಕಳ ಭಾವನೆಗೆ ಬೆಲೆಕೊಟ್ಟು ಅವರನ್ನು ಪ್ರೋತ್ಸಾಹಿಸುವುದರಿಂದ ಈ ಸಮಾಜಕ್ಕೆ ಅವರು ಉತ್ತಮ ಆಸ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ವೇದಪ್ರದ ತಿಳಿಸಿದರು