ವಿಂಟೇಜ್ ಕಾರು-ಜಟಕಾ ಬಂಡಿ ಜಾಥಾ

ಮೈಸೂರು: ಮೈಸೂರಿನ ಕೇಂದ್ರ ಬಿಂದು ಅರಮನೆಯ ಕೋಟೆ‌ ಆಂಜನೇಯಸ್ವಾಮಿ ದೇವಾಲಯದ ಬಳಿ ಹಳೆ ಮಾಡೆಲ್ ಕಾರುಗಳು,ಜಟಕಾ ಬಂಡಿಗಳು ಶಿಸ್ತಾಗಿ‌ ನಿಂತಿದ್ದನ್ನು ಕಂಡು ಜನ ಕುತೂಹಲದಿಂದ ನೋಡಲು ಮುಗಿಬಿದ್ದರು.

ಭಾರತ ಚುನಾವಣಾ ಆಯೋಗದ ಸ್ವೀಪ್ ವತಿಯಿಂದ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಬಾಗ ಚುನಾವಣಾ ಸಂಬಂಧಿತ ವಿಂಟೇಜ್ ಕಾರು ಮತ್ತು ಟಾಂಗಾ ಜಾಥಾ ಹಮ್ಮಿಕೊಂಡಿದ್ದುದು ಜನ ಓಡೋಡಿ‌ ಬರಲು‌ ಕಾರಣ.

ಜಿಲ್ಲಾಧಿಕಾರಿ ಕೆ. ವಿ ರಾಜೇಂದ್ರ, ಜಿ. ಪಂ. ಸಿಇಒ ಗಾಯತ್ರಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮತ್ತಿತರ ಅಧಿಕಾರಿಗಳು ಹಾಜರಿದ್ದು ಜಾಥಾಗೆ ಚಾಲನೆ ನೀಡಿದರು.

ಜಾಥಾ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಿ- ಕೆ.ಆರ್ ಸರ್ಕಲ್, ಅರಸು ರಸ್ತೆ,ಜೆ.ಎಲ್.ಬಿ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಕೆ.ಆರ್.ಆಸ್ಪತ್ರೆ ರಸ್ತೆ ಬಲತಿರುವು, ಸೈಯ್ಯಾಜಿರಾವ್ ರಸ್ತೆ  ಮಾರ್ಗವಾಗಿ ಚಿಕ್ಕಗಡಿಯಾರ ವೃತ್ತದಲ್ಲಿ ಅಂತ್ಯಗೊಂಡಿತು.

ಇದೇ ವೇಳೆ ​ಮೈಸೂರಿನ ದೇವರಾಜ ಮಾರುಕಟ್ಟೆ (ಚಿಕ್ಕ ಗಡಿಯಾರ) ಬಳಿ ಕಾವಾ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಕುರಿತು ಚಿತ್ರ ಬಿಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.

ಇದಕ್ಕೆ‌ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಚಾಲನೆ ನೀಡಿದರು.