ಮೈಸೂರು: ದೇವಾಲಯದ ಬಾಗಿಲ ಲಾಕರ್ ಗಳನ್ನು ಕತ್ತರಿಸಿ ಹುಂಡಿಯನ್ನು ಕದ್ದೊಯ್ದಿರುವ ಘಟನೆ ಮೈಸೂರು ತಾಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಹಂಚ್ಯಾ ಗ್ರಾಮದ ಸೋಮೇಶ್ವರ ದೇವಾಲಯದ ಬಾಗಿಲ ಲಾಕರ್ ಗಳನ್ನು ಕತ್ತರಿಸಿ ಹುಂಡಿಯನ್ನೇ ಕಳ್ಳರು ಕದೊಯ್ದಿದ್ದಿದ್ದಾರೆ.
ಗ್ರಾಮದ ಒಳಗೆ ಇರುವ ದೇವಾಲಯದ ಬಾಗಿಲಿಗೆ ಹಾಕಿದ್ದ ಲಾಕರ್ ಅನ್ನು ಕಳ್ಳಯ ಚಾಲೂಕಾಗಿ ಕೊಯ್ದು ಒಳ ನುಗ್ಗಿ ಹುಂಡಿಯನ್ನು ತೆಗೆದುಕೊಂಡು ಹೋಗಿದ್ದಾರೆ.
ಸುಮಾರು 1 ಕಿ.ಮೀ ವರೆಗೆ ತೆಗೆದುಕೊಂಡು ಹೋಗಿ ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹುಂಡಿಯನ್ನು ಅಲ್ಲೇ ಎಸೆದು ಹೋಗಿದ್ದಾರೆ.
ಒಂದು ಪ್ಯಾಷನ್ ಹಾಗೂ ಅಪಾಚಿ ಬೈಕಿನಲ್ಲಿ ಬಂದು ಮುಂಜಾನೆ 4 ಗಂಟೆ ಸಮಯದಲ್ಲಿ ನಾಲ್ಕು ಮಂದಿ ದೇವಾಲಯದ ಬಳಿ ನಿಂತಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ.
ಭಾನುವಾರ ಬೆಳಿಗ್ಗೆ ದೇವಾಲಯದ ಬಾಗಿಲು ತೆಗೆದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ದೇವಾಲಯದಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಗ್ರಾಮದಲ್ಲಿ ಇದುವರೆವಿಗೂ ಬೈಕ್ ಕಳವು, ದೊಡ್ಡ ವಾಹನಗಳ ಬ್ಯಾಟರಿ ಕಳವು ಪ್ರಕರಣಗಳು ನಡೆಯುತ್ತಿದ್ದವು.
ಆದರೆ ಇದೇ ಮೊದಲ ಬಾರಿಗೆ ದೇವಾಲಯದ ಹುಂಡಿಯನ್ನೇ ಕದ್ದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಕೂಡಲೆ ಗ್ರಾಮದಲ್ಲಿ ಪೊಲೀಸ್ ಗಸ್ತು ಹಾಕಬೇಕು,ಹುಂಡಿ ಕದ್ದವರನ್ನು ಬೇಗ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.