ಮೈಸೂರು: ಧಾರ್ಮಿಕ ಹಬ್ಬಗಳಿಗಿಂತ ಶ್ರೇಷ್ಠವಾದದ್ದು ಪ್ರಜಾಪ್ರಭುತ್ವದ ಹಬ್ಬವಾದ ಮತದಾನ ಎಂದು ಖ್ಯಾತ ವಾಗ್ಮಿ ಕೆ.ಎಸ್. ಮುಕುಂದ ತಿಳಿಸಿದರು.
ಈ ಶ್ರೇಷ್ಟ ಹಬ್ಬದಲ್ಲಿ ಪ್ರಜ್ಞಾವಂತ ನಾಗರಿಕರೆಲ್ಲರೂ ಆಸೆ ಅಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣ ಧಾಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಏರ್ಪಡಿಸಿದ್ದ ವಿಪ್ರ ಕಡ್ಡಾಯ ಮತದಾನದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಸರ್ವರೂ ಸಮಾನತೆಯಿಂದ ಲಿಂಗಭೇದವಿಲ್ಲದೆ ಬಾಳಲು ಸಾಧ್ಯವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ.ಹಾಗಾಗು ಕಡ್ಡಾಯವಾಗಿ ಅರ್ಹ ವ್ಯಕ್ತಿಗಳಿಗೆ ಮತ ಚಲಾಯಿಸುವ ಮೂಲಕ ನಮ್ಮ ನೈತಿಕ ಜವಾಬ್ದಾರಿಯನ್ನು ಪೂರೈಸಬೇಕು ಎಂದು ತಿಳಿಸಿದರು.
ಎಲ್ಲ ಕ್ಷೇತ್ರದಲ್ಲೂ ಶೇಕಡವಾರು ಮತದಾನ ಪ್ರಮಾಣವನ್ನು ಹೆಚ್ಚಿಸಬೇಕು ಎಂದರು
ಸಭೆಯಲ್ಲಿ ಮೈಸೂರು ಗ್ರಾಮಾಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋಪಾಲ್ ರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನಂ. ಶ್ರೀಕಂಠ ಕುಮಾರ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕ ಎಂ. ಆರ್ ಬಾಲಕೃಷ್ಣ, ಜಿಎಸ್ಎಸ್ ಸಂಸ್ಥೆಯ ಸಂಸ್ಥಾಪಕ ಶ್ರೀ ಹರಿ ದ್ವಾರಕನಾಥ್, ವಿಪ್ರ ಇ – ಪ್ರೊಫೆಷನಲ್ ಫೋರಂನ ಅಧ್ಯಕ್ಷ ಶ್ರೀನಿವಾಸ್ ಭಾಷ್ಯಂ, ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಶಾಸ್ತ್ರಿ, ಮೋಹನ್ ಭಟ್ , ವಿಪ್ರ ಮಹಿಳಾಸಂಗಮದ ಅಧ್ಯಕ್ಷರಾದ ಡಾಕ್ಟರ್ ಲಕ್ಷ್ಮಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್,ವಸಂತ್ ಕುಮಾರ್, ವಿಪ್ರ ಜಾಗೃತಿ ವೇದಿಕೆ ಅಧ್ಯಕ್ಷ ಮುಳ್ಳೂರು ಸುರೇಶ್, ಅಜಯ್ ಶಾಸ್ತ್ರಿ, ಕಡಕೋಳ ಜಗದೀಶ್, ಸುಚೇಂದ್ರ, ಚಕ್ರಪಾಣಿ ಮತ್ತಿ ತರರು ಪಾಲ್ಗೊಂಡಿದ್ದರು.