ಮೈಸೂರು: ವರಸೆಯಲ್ಲಿ ಅಣ್ಣನಾದರೂ ಪ್ರೀತಿಸಿ ವಿವಾಹವಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮದ ಮಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೀಪಿಕಾ(21) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ.
ದೀಪಿಕಾ ಹಾಗೂ ನಾಗರಾಜ್ ದೂರದ ಸಂಬಂಧಿಗಳು. ವರಸೆಯಲ್ಲಿ ಅಣ್ಣ ತಂಗಿ ಆಗಬೇಕು.
ಆದರೂ ಇಬ್ಬರು ಪ್ರೀತಿಸಿದ್ದಾರೆ.ವರಸೆಯಲ್ಲಿ ಅಣ್ಣತಂಗಿ ಆದ ಕಾರಣ ಎರಡು ಮನೆಯವರಲ್ಲೂ ಮದುವೆಗೆ ವಿರೋಧವಿತ್ತು.
ಮನೆಯವರ ವಿರೋಧ ಲೆಕ್ಕಿಸದೆ ಪ್ರೇಮಿಗಳು ಮೂರು ವರ್ಷಗಳ ಹಿಂದೆ ಮನೆ ಯಿಂದ ಪರಾರಿ ಆಗಿ ವಿವಾಹವಾಗಿದ್ದರು.
ಎರಡು ವರ್ಷಗಳ ಕಾಲ ಕೆ.ಆರ್.ನಗರದ ಗ್ರಾಮವೊಂದರಲ್ಲಿ ನೆಲೆಸಿ ಒಂದು ವರ್ಷದ ಹಿಂದೆ ಮಲುಗನಹಳ್ಳಿ ಗ್ರಾಮಕ್ಕೆ ಬಂದಿದ್ದಾರೆ.
ನಾಗರಾಜ್ ಹಾಗೂ ಪೋಷಕರು ದೀಪಿಕಾಗೆ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟಿದ್ದಾರೆ.
ಇದರಿಂದ ಬೇಸತ್ತು ದೀಪಿಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೊಷಕರು ದೂರಿದ್ದಾರೆ.
ದೀಪಿಕಾ ಪೋಷಕರು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪದಡಿ ಗಂಡ ನಾಗರಾಜ್,ಮಾವ ತಮ್ಮಯ್ಯ ಹಾಗೂ ಅತ್ತೆ ಜಯಮ್ಮನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.