ಮೈಸೂರು: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ಮತ ಹಾಕಿದ್ದಕ್ಕೆ ಗುರುತಿಗಾಗಿ ಹಾಕುವ ಶಾಯಿ ಕೂಡಾ ಮತಗಟ್ಟೆಗಳಿಗೆ ರವಾನೆಯಾಗಿದೆ.
ವೋಟಿಂಗ್ ಮಾಡಿದ ಬಳಿಕ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ. ಈ ಅಳಿಸಲಾಗದ ಶಾಯಿಯನ್ನ ಮೈಸೂರಿನಿಂದ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ.
ಮೇ 10 ರಂದು ನಡೆಯಲಿರುವ ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮೈಸೂರಿನ ಕಪ್ಪು ಶಾಯಿ ರವಾನೆಯಾಗಿದೆ.
ಚುನಾವಣಾ ಆಯೋಗದ ಬೇಡಿಕೆ ಹಿನ್ನೆಲೆ 1 ಲಕ್ಷದ 20 ಸಾವಿರ ಬಾಟಲ್ ಪೂರೈಕೆ ಮಾಡಲಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಕಾರ್ಖಾನೆ ಆರಂಭಿಸಿದ್ದರು.
ನಂತರ 1962ರಲ್ಲಿ ಅಳಿಸಲಾಗದ ಶಾಯಿ ತಯಾರಿಕೆ ಆರಂಭವಾಗಿತ್ತು. ಸ್ವಾತಂತ್ರ್ಯ ನಂತರದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಿಗೂ ಇಲ್ಲಿದಂಲೇ ಶಾಯಿ ಪೂರೈಕೆಯಾಗುತ್ತಿದೆ.