ಮೈಸೂರು: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ,ಶಾಂತಿಯುತ ಮತದಾನ ನಡೆಸಲು ಚುನಾವಣಾ ಆಯೋಗವೂ ಸಜ್ಜಾಗಿದ್ದು ಎಲ್ಲೆಡಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು,
ಜಿಲ್ಲೆಯಲ್ಲಿ ಒಟ್ಟು 143 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು ಮತಗಟ್ಟೆಗಳು 2905.
ಚಾಮರಾಜ 244,ಕೃಷ್ಣರಾಜ 265,ನರಸಿಂಹರಾಜ 282,ವರುಣ 261,
ಚಾಮುಂಡೇಶ್ವರಿ 337,ನಂಜನಗೂಡು 249,
ಟಿ. ನರಸೀಪುರ 227,ಹುಣಸೂರು 273,ಪಿರಿಯಾಪಟ್ಟಣ 235,ಕೆ ಆರ್ ನಗರ 250,ಹೆಚ್ ಡಿ ಕೋಟೆ 282 ಮತಗಟ್ಟೆಗಳಿವೆ.
ಶಾಂತಿಯುತ ಮತದಾನ ನಡೆಸಲು
6000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ 2905 ಮತಗಟ್ಟೆಗಳಿಗೆ
3156 ಅಧ್ಯಕ್ಷಾಧಿಕಾರಿಗಳು,
3250 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು,
6352 ಮತದಾನಾಧಿಕಾರಿಗಳನ್ನ ನೇಮಕ ಮಾಡಲಾಗಿದೆ.
600 ಮೈಕ್ರೋ ಅಬ್ಸರ್ವರ್ ಗಳನ್ನ ನೇಮಕ ಮಾಡಲಾಗಿದೆ.