ಮೈಸೂರು: ಮೈಸೂರು ತಾಲ್ಲೂಕು ಏಳಿಗೆ ಹುಂಡಿ ಗ್ರಾಮದಲ್ಲಿ ಒಳ ಚರಂಡಿ,ರಸ್ತೆ ಕಾಮಾಗಾರಿಗಳು,ರಸ್ತೆ ಸೇರಿದಂತೆ ಯಾವುದೆ ಮೂಲಸೌಲಭ್ಯ ವ್ಯವಸ್ಥೆ ಇಲ್ಲವೆಂದು ಬೇಸತ್ತು ಗ್ರಾಮಸ್ಥರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲವೆಂದು ಪಟ್ಟು ಹಿಡಿದ ಘಟನೆ ನಡೆಯಿತು.
ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಮತದಾನ ಪ್ರಕ್ರಿಯೆ ಪ್ರಾರಂಭವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಮೈಸೂರು ತಾಲ್ಲೂಕು ತಹಶೀಲ್ದಾರ್ ಹಾಗೂ 215-ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಎನ್.ಗಿರೀಶ್ ಮತ್ತು ಡಿ.ವೈ.ಎಸ್.ಪಿ ಗ್ರಾಮಾಂತರ ದವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರುಗಳ ಸಮಸ್ಯೆಗಳನ್ನು ಆಲಿಸಿದರು.
ನಂತರ ಮಾತನಾಡಿದ ತಹಶೀಲ್ದಾರ್ ಬಿ.ಎನ್.ಗಿರೀಶ್ ರವರು ನೀವೆಲ್ಲರು ಈ ಭಾರಿಯ ಚುನಾವಣೆಯಲ್ಲಿ ನಿಮಗೆ ಇಷ್ಟವಾದ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನು ಚಲಾಯಿಸಬೇಕೆಂದು ಸಲಹೆ ನೀಡಿದರು.
ಭಾರತ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು ಇಂತಹ ಸಂದರ್ಭದಲ್ಲಿ ಬಹಿಷ್ಕಾರ ಮಾಡುವುದು ಸೂಕ್ತವಲ್ಲವೆಂದು ಮತದಾನದ ಮಹತ್ವವನ್ನು ಗ್ರಾಮಸ್ಥರುಗಳಿಗೆ ತಿಳಿಸಿ ಗ್ರಾಮಸ್ಥರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.
ನಂತರ ಮತಗಟ್ಟೆಗೆ ಗ್ರಾಮಸ್ಥರನ್ನು ಕರೆತಂದು ಮತದಾನ ಮಾಡಿಸುವಲ್ಲಿ ಯಶಸ್ವಿಯಾದರು.
ಮಧಾಹ್ನದ ನಂತರ ಪುರುಷರು 159 ಮತ್ತು ಮಹಿಳೆರು 121 ಒಟ್ಟು 280 ಮತಗಳನ್ನು ಚಲಾಯಿಸಿದರು.