ಮೈಸೂರು,ಮೇ 11-ಮೈಸೂರು ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಶೇ 75.04ರಷ್ಟು ಮತದಾನವಾಗಿದೆ.
143 ಅಭ್ಯರ್ಥಿಗಳ ಭವಿಷ್ಯ ಇವಿಎಂ ಗಳಲ್ಲಿ ಭದ್ರವಾಗಿದೆ.
ಪಡುವಾರ ಹಳ್ಳಿಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ ಇವಿಎಂ ಗಳು ಭದ್ರವಾಗಿದೆ.
ಅಭ್ಯರ್ಥಿಗಳ ಹಣೆ ಬರಹಕ್ಕೆ ಮೇ 13ರಂದು ಅಂತಿಮ ತೀರ್ಪು ಸಿಗಲಿದೆ.
ತಾಲೂಕುವಾರು ಮತದಾನ ವಿವರ -:
ಕೆ.ಆರ್.ನಗರ- ಶೇ 85.1ರಷ್ಟು ಮತದಾನ ಆಗಿದೆ.
ಪಿರಿಯಾಪಟ್ಟಣ -ಶೇ 84.42,
ವರುಣ -/ಶೇ 84.39,
ಹುಣಸೂರು -ಶೇ 82.16,
ನಂಜನಗೂಡು- ಶೇ 80.67,
ಎಚ್.ಡಿ.ಕೋಟೆ- ಶೇ 79.85,
ತಿ.ನರಸೀಪುರ- ಶೇ 78.77,
ಚಾಮುಂಡೇಶ್ವರಿ- ಶೇ 74.05,
ಚಾಮರಾಜ- ಶೇ 61.12,
ನರಸಿಂಹರಾಜ- ಶೇ 63.44,
ಕೃಷ್ಣರಾಜ -ಶೇ 59.34 ರಷ್ಟು ಮತದಾನವಾಗಿದೆ
ಮಹಾರಾಣಿ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗಳಿಗೆ 3 ಹಂತದ ಭದ್ರತೆ ಒದಗಿಸಲಾಗಿದೆ.
1ನೇ ಭದ್ರತೆ ಸಿ.ಎ.ಪಿ.ಎಫ್ ತುಕಡಿಯಿಂದ.
2ನೇ ಸಶಸ್ತ್ರ ಮೀಸಲು ಪಡೆಯಿಂದ.
3ನೇ ಹಂತದಲ್ಲಿ ಸ್ಥಳೀಯ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಸ್ಟ್ರಾಂಗ್ ರೂಂ ಗಳನ್ನ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿಡಲಾಗಿದೆ.
ಭದ್ರತಾ ಕೊಠಡಿ ಪ್ರವೇಶಿಸುವ ಮುನ್ನ ಲಾಗ್‌ಬುಕ್‌ನಲ್ಲಿ ನಮೂದನೆ ಕಡ್ಡಾಯವಿದೆ.
ಸುಮಾರು ಒಂದೂವರೆ ತಿಂಗಳು ಅಭ್ಯರ್ಥಿಗಳು ಮತದಾರರ ಓಲೈಕೆಯಲ್ಲಿ ಕಸರತ್ತು ನಡೆಸಿ ಇದೀಗ ರಿಲ್ಯಾಕ್ಸ್ ಆಗಿದ್ದಾರೆ.
ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಮೇ 13 ರಂದು ಎಣಿಕೆ ಕಾರ್ಯ ಆರಂಭವಾಗಲಿದ್ದು ಮಧ್ಯಾಹ್ನ 12 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.