82 ವರ್ಷದ ವೃದ್ದೆ ಮೇಲೆ ಅತ್ಯಾಚಾರ:19 ವರ್ಷದ ಕಾಮುಕ ಅರೆಸ್ಟ್

ಮೈಸೂರು: ಒಂಟಿ ಜೀವನ ಸಾಗಿಸುತ್ತಿದ್ದ 82 ವರ್ಷದ ವೃದ್ದೆ ಮೇಲೆ ಅತ್ಯಾಚಾರವೆಸಗಿದ 19 ವರ್ಷದ ಕಾಮುಕನನ್ನು ಪೊಲೀಸರು ಬಂದಿಸಿದ್ದಾರೆ.

ಕರಕುಶಲ ನಗರದ ನಿವಾಸಿ ಆಟೋ ಡ್ರೈವರ್ ಮನೋಜ್ (19) ಬಂಧಿತ ಆರೋಪಿ.

ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಮಂಟಪದಲ್ಲಿ ಘಟನೆ ನಡೆದಿದೆ.

ಸಂತ್ರಸ್ತ ವೃದ್ದೆಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅವಿವಾಹಿತ ವೃದ್ದೆ ಬನ್ನಿಮಂಟಪದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು.ಅಕ್ಕಪಕ್ಕದ ಮನೆಯವರ ಪರಿಚಯ ಮಾಡಿಕೊಂಡಿದ್ದ ಮನೋಜ್ ಮೇ 8ರಂದು ಮನೆಗೆ ನುಗ್ಗಿ ಅತ್ಯಾಚಾರ ಮಾಡಿ ಪರಾರಿ ಆಗಿದ್ದ.

ಈ ಬಗ್ಗೆ ವೃದ್ದೆ ಎನ್.ಆರ್.ಠಾಣೆಗೆ ದೂರು ನೀಡಿದ್ದರು.

ತಕ್ಷಣ ಪೊಲೀಸರು ಕಾಮುಕ ಮನೋಜ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.