ಮೈಸೂರು: ಪೊಲೀಸ್ ಸಿಬ್ಬಂದಿ ಮನೆಯಲ್ಲಿದ್ದ 2 ಕೆ. ಜಿ. ಚಿನ್ನ ನಿಗೂಢ ರೀತಿಯಲ್ಲಿ ಅಪಹರಣ ಆಗಿರುವ ಘಟನೆ ಮೈಸೂರಲ್ಲಿ ನಡೆದಿದೆ.
ನಗರದ ಸರಸ್ವತಿಪುರಂನ 5ನೇ ಮುಖ್ಯ ರಸ್ತೆ ವಾಸಿ ವಿಜಿ ಕುಮಾರ್ ಅವರ ನಿವಾಸದಲ್ಲಿದ್ದ ಎರಡು ಕೆ. ಜಿ. ಚಿನ್ನ ನಾಪತ್ತೆ ಆಗಿದೆ.
ವಿಜಿ ಕುಮಾರ್ ಬಿಸಿನೆಸ್ ಮೆನ್ ಇವರ ಪತ್ನಿ ವನಜಾಕ್ಷಿ ಮೈಸೂರು ನಗರ ಪೆÇಲೀಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಮನೆಯಲ್ಲಿದ್ದ 2 ಕೆಜಿ ಚಿನ್ನ ಸೋಮವಾರದಿಂದ ಕಾಣೆಯಾಗಿದೆ.
ಈ ಪೈಕಿ ಒಂದೂವರೆ ಕೆಜಿ ಚಿನ್ನ ವಿಜಿ ಕುಮಾರ್ ಅವರಿಗೆ ಸೇರಿದ್ದು, ಉಳಿದ ಅರ್ಧ ಕೆಜಿ ಚಿನ್ನ ಇವರ ಸಂಬಂಧಿಕರು ಅವರ ಮನೆ ರಿಪೇರಿ ಮಾಡಿಸುತ್ತಿದ್ದುದರಿಂದ ಇವರ ಮನೆಯಲ್ಲಿ ಇರಿಸಿದ್ದರು.
ಮನೆ ಮುಂಬಾಗಿಲು ಮೀಟಿ ಯಾರೂ ಮನೆಯೊಳಗೆ ನುಗ್ಗಿಲ್ಲ, ನಕಲಿ ಕೀ ಬಳಸಿಲ್ಲ, ಮನೆ ಬೀಗ ಮುರಿದಿಲ್ಲ, ಹಿಂಬಾಗಿನಿಂದ ಯಾರೂ ನುಗ್ಗಿ ಬಂದಿಲ್ಲ ಹೀಗಿದ್ದರು 2 ಕೆಜಿ ಚಿನ್ನ ಕಳವು ಆಗಿದೆ.
ವಿಜಿ ಕುಮಾರ್ ಅವರಿಗೆ ಆ. 17ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ತಾಯಿಯಲ್ಲೂ ಕೊರೊನಾ ಪತ್ತೆ ಆಗಿರುವುದರಿಂದ ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಏತನ್ಮಧ್ಯೆ ಸೋಮವಾರ ಮಧ್ಯಾಹ್ನದಿಂದ ಮನೆಯಲ್ಲಿನ 2 ಕೆಜಿ ಚಿನ್ನಾಭರಣ ಹೇಗೆ ಅಪಹರಣ ಆಗಿದೆ ಎಂಬುದೇ ಯಕ್ಷ ಪ್ರಶ್ನೆ ಆಗಿದೆ.
ಸರಸ್ವತಿಪುರಂ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.