ಅವ್ವಾ ಮಾದೇಶ್ ಸಹಚರನ ಭೀಕರ ಹತ್ಯೆ:ಹಾಡ ಹಗಲೇ ನಡೆದ ಕೃತ್ಯ

ಮೈಸೂರು: ಮಾಜಿ ಕಾರ್ಪೊರೇಟರ್ ಅವ್ವಾಮಾದೇಶ್ ಸಹಚರನನ್ನು ಹಾಡುಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದ್ದು ಒಂಟಿಕೊಪ್ಪಲ್ ಭಾಗದ ಜನ‌ ಬೆಚ್ಚಿಬಿದ್ದಿದ್ದಾರೆ.

ಕುಂಡ ಚಂದ್ರು(42) ಕೊಲೆಯಾದ ಅವ್ವಾಮಾದೇಶನ ಸಹಚರ.

ಮೈಸೂರಿನ ಒಂಟಿಕೊಪ್ಪಲ್ ಮೂರನೇ ಕ್ರಾಸ್ ನಲ್ಲಿರುವ ಚಂದ್ರುವಿನ ನಿವಾಸದ ಮುಂಭಾಗದಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಹುಣಸೂರಿನಲ್ಲಿ ನಡೆದ ಜೋಡಿ ಕೊಲೆ ಹಾಗೂ ದೇವು ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದ ಕುಂಡ ಚಂದ್ರು ನಿರ್ದೋಷಿಯಾಗಿ ಬಿಡಿಗಡೆಯಾಗಿದ್ದ.

ಮಾತೃಮಂಡಳಿ ವೃತ್ತದಲ್ಲಿ ಫಾಸ್ಟ್ ಫುಡ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದ.ಗುರುವಾರ ಸಂಜೆ ಇಬ್ಬರು ಹಂತಕರು ಕುಂಡ ಚಂದ್ರುವಿನ ಮೇಲೆ‌ ಏಕಾಏಕಿ‌ ದಾಳಿ ಮಾಡಿದ್ದಾರೆ.

ತೀವ್ರ ಗಾಯಗೊಂಡ ಕುಂಡ ಚಂದ್ರುವನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ವಿ.ವಿ.ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಷಯ ಹರಡುತ್ತಿದ್ದಂತೆ ಸುತ್ತಮುತ್ತಲಿನ ಕುಂಡ ಚಂದ್ರು ಮನೆ ಬಳಿ ದಾವಿಸಿದ್ದರು. ಚಂದ್ರು ಮನೆ ಸುತ್ತಮುತ್ತ
ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.