ಮೈಸೂರಲ್ಲಿ ಸಿದ್ದು ಅಭಿಮಾನಿ ಬಳಗದಿಂದ ಸಿಹಿ ಹಂಚಿ ಸಂಭ್ರಮಾಚರಣೆ

ಮೈಸೂರು: ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿದ್ದು ಅಭಿಮಾನಿ ಬಳಗದವರು ಮೈಸೂರಿನಲ್ಲಿ ಸಂಭ್ರಮಾಚರಣೆ ಮಾಡಿದರು.

ನಗರದ ತ್ಯಾಗರಾಜ ರಸ್ತೆ ಆರನೇ ಕ್ರಾಸ್ ನಲ್ಲಿರುವ ಪ್ರಮಥ ಪ್ರಿಂಟರ್ಸ್ ಮುಂಭಾಗ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದರು.

ಸಿದ್ದು ಅಭಿಮಾನಿ ಬಳಗದ ಸದಸ್ಯರಾದ ರೇವಣ್ಣ, ಮಂಜುನಾಥ್, ಸೋಮಶೇಖರ್, ಜಗದೀಶ್, ನಾಗಣ್ಣ, ನಾಗರಾಜು, ಬಾಲಕೃಷ್ಣ, ಗುರುರಾಜ್, ಹೇಮಂತ್, ದಡದಹಳ್ಳಿ ಮಂಜು ಸೇರಿದಂತೆ ಹಲವಾರು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.