ಮುಡಾದಿಂದ 10 ಕೋಟಿ ರೂ. ಆಸ್ತಿ ರಕ್ಷಣೆ

ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮ ಗುಡಿಸಲು ಮತ್ತು ಶೆಡ್ ನ್ನು ತೆರವುಗೊಳಿಸಿದೆ.
ಮೈಸೂರು ತಾಲ್ಲೋಕು, ಲಲಿತಾದ್ರಿಪುರ ಗ್ರಾಮ ಸರ್ವೆ ನಂ 16/1, 16/2, 16/3, 17, 18/2, 18/3 ಮತ್ತು 1874ರಲ್ಲಿ ಒಟ್ಟು 15-19 ಎಕರೆ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ನಗರ ಆಶ್ರಯ ಮನೆಗಳನ್ನು ನಿರ್ಮಿಸಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು.
ಆದರೆ ಈ ಜಾಗದÀಲ್ಲಿ ಕೆಲವರು ಅನಧಿಕೃತವಾಗಿ ಸುಮಾರು 15ಕ್ಕೂ ಹೆಚ್ಚು ಸಣ್ಣ ಗುಡಿಸಲು ಮತ್ತು ಶೆಡ್ಡುಗಳನ್ನು ಹಾಕಿಕೊಂಡಿದ್ದರು. ಅವುಗಳನ್ನು ತೆರವುಗೊಳಿಸಲಾಗಿದೆ.
10 ಕೋಟಿ ರೂ. ಗೂ ಮಿಗಿಲಾದ ಆಸ್ತಿಯನ್ನು ರಕ್ಷಿಸಿ, ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಉದ್ದೇಶಿತ ನಗರ ಆಶ್ರಯ ಮನೆಗಳನ್ನು ನಿರ್ಮಿಸುವ ಸಂಬಂಧ ಮೈಸೂರು ಮಹಾನಗರಪಾಲಿಕೆಗೆ ಹಸ್ತಾಂತರಿಸಲಾಗಿದೆ.
ಸದರಿ ತೆರವು ಕಾರ್ಯಾಚರಣೆಯನ್ನು ಮೈಸೂರು ಗ್ರಾಮಾಂತರ ಪೆÇಲೀಸರ ಭದ್ರತೆಯೊಂದಿಗೆ ನಡೆಸಲಾಗಿದೆ.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಆಯುಕ್ತರಾದ ಡಾ.ಡಿ.ಬಿ.ನಟೇಶ್ , ಅಭಿಯಂತರಾದ ಶಂಕರ್, ಮುಡಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.