ಕಬ್ಬಿಣದ ರಾಡ್ ನಿಂದ ಹೊಡೆದು ಮಹಿಳೆ ಕೊಲೆ

ಮೈಸೂರು: ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಮೈಸೂರಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ.

ಮಮತಾ (32) ಕೊಲೆಯಾದ ದುರ್ಧೈವಿ.

ಮೋಹನ ( 26 ) ಎಂಬಾತ ಮಮತಾರನ್ನು ಕೊಲೆ ಮಾಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.

ಸಿದ್ದಲಿಂಗಪುರ ಗ್ರಾಮದಲ್ಲಿ ಬೇಕರಿ ಇಟ್ಟುಕೊಂಡಿದ್ದ‌ ಮೋಹನ, ಗಂಡನಿಂದ‌ ದೂರ ಇದ್ದ ಮಮತಾ ಕೂಡಾ ಮೋಹನ್‌ ಜತೆ ಸೇರಿ ಬೇಕರಿ ನಡೆಸುತ್ತಿದ್ದರು.

ಇಬ್ಬರ ನಡುವೆ ಮಾತಿಗೆ ಮಾತು‌ ಬೆಳೆದು ಜಗಳವಾಗಿದ್ದು ಮೋಹನ್ ಕಬ್ಬಿಣದ ರಾಡ್ ನಿಂದ ಹೊಡೆದು ಮಮತಾರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು  ಮುಂದಿನ ಕ್ರಮ ಕೈಗೊಂಡಿದ್ದಾರೆ.