ಮೈಸೂರು: ಪತ್ನಿಯ ಅಕ್ರಮ ಸಂಬಂಧ ಬಯಲಾದ ಹಿನ್ನಲೆಯಲ್ಲಿ ಬೇಸತ್ತ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲೂಕು ಹಳ್ಳಿಕೆರೆ ಹುಂಡಿ ಗ್ರಾಮದಲ್ಲಿ ನಡೆದಿದೆ.
ಶಶಿಧರ್ (39) ಆತ್ಮಹತ್ಯೆ ಮಾಡಿಕೊಂಡ ಪತಿ.
ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಶಶಿಧರ್ 10 ವರ್ಷಗಳ ಹಿಂದೆ ಭವ್ಯಾ ಎಂಬವಳನ್ನ ವಿವಾಹವಾಗಿದ್ದರು.
ದಂಪತಿಗೆ ಎರಡು ಮಕ್ಕಳಿವೆ. ಇತ್ತೀಚೆಗೆ ಭವ್ಯ ಪರಪುರಷ ನೊಂದಿಗೆ ಸಂಬಂಧ ಬೆಳೆಸಿದ್ದಳು.
ಈ ವಿಷಯ ತಿಳಿದು ಬೇಸರಗೊಂಡ ಶಶಿಧರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರುಣ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.