ಮೈಸೂರು: ವಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
ಮೈಸೂರು ಜಿಲ್ಲೆಯ ಎಂಟು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಬಡ ಮಕ್ಕಳಿಗೆ ಅನುಕೂಲವಾಗಲೆಂದು ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ.
ಇದರ ಅನ್ವಯ ಶುಕ್ರವಾರ ಮೈಸೂರಿನ ಮಹಾರಾಜ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಲಾಯಿತು.
ನಮ್ಮ ಸಂಸ್ಥೆ ವತಿಯಿಂದ ಹಲವಾರು ಸೇವಾ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ,ಮಹಾರಾಜ ಶಾಲೆಯ ನೂರಾರು ವಿಧ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದ್ದೇವೆ.
ಮೈಸೂರು ಜಿಲ್ಲೆಯ ಮೈಸೂರು, ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ 8 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗಿದೆ ಎಂದು ವಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಖಜಾಂಚಿ ಹರ್ಷ ಶಂಕರ್ ತಿಳಿಸಿದರು.
ಈಗಾಗಲೇ ಸಾವಿರ ನೋಟ್ ಪುಸ್ತಕ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳುವ ಚಿಂತನೆ ಮಾಡಿದ್ದೇವೆ ಎಂದು ಖಜಾಂಚಿ ಹರ್ಷ ಶಂಕರ್ ತಿಳಿಸಿದರು.
ವೈಸ್ ಪ್ರೀನ್ಸಿಪಲ್ ಮಹೇಶ್ ಮಾತನಾಡಿ ವಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮಹಾರಾಜ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದ್ದಾರೆ.ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇನ್ನೂ ಕೆಲವರು ಕಡು ಬಡವರು ಓದುತ್ತಿದ್ದಾರೆ.ಅವರಿಗೆ ಶಾಲಾ ಶುಲ್ಕ ಕಟ್ಟಲೂ ಸಹ ಆಗುತ್ತಿಲ್ಲ ಅಂತವರಿಗೂ ಸಹಾಯ ಮಾಡುವಂತೆ ದಾನಿಗಳಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿದರು.
ಸಂಸ್ಥೆಯ ಅಧ್ಯಕ್ಷರ ಸಂತೋಷ್,
ಜನರಲ್ ಸೆಕ್ರೆಟರಿ ಪೂಜಾ ಹರ್ಷ,ವಕೋ ಇಂಟರ್ ನ್ಯಾಷನಲ್ ಮೆಡಲಿಸ್ಟ್ ಶ್ರೇಷ್ಠ ಶಂಕರ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.