ಷೋರೂಂ ಶೆಟರ್ ಮುರಿದು ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್

ಮೈಸೂರು: ಮೈಸೂರಿನ ಪ್ಯೂಮಾ ಷೋರೂಂ ಶೆಟರ್ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಜ್ವಲ್(20) ಬಂಧಿತ ಆರೋಪಿ.

ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ,ಎರಡು ಮೊಬೈಲ್ ಹಾಗೂ 5500 ರೂ ವಶಪಡಿಸಿಕೊಳ್ಳಲಾಗಿದೆ.

ಮೇ 7 ರಂದು ಪ್ರಜ್ವಲ್  ಷೆಟರ್ ಮುರಿದು ಷೋರೂಂ ನಲ್ಲಿದ್ದ 27 ಸಾವಿರ ಹಾಗೂ 20 ಸಾವಿರ ಮೌಲ್ಯದ ಪಾದರಕ್ಷೆಗಳು,ಕ್ಯಾಪ್ ಹಾಗೂ ಪರ್ಸ್ ಗಳನ್ನ ದೋಚಿ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಕುವೆಂಪುನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ಆರೋಪಿಯು ತನ್ನ ಸಹಚರರಾದ ನಿತಿನ್,ಭಾಷಾ,ಚೇತನ್ ಎಂಬವರ‌ ಜತೆ ಸೇರಿ ಮೈಸೂರು,ಬೆಂಗಳೂರು,ಹೊಸಪೇಟೆ,ಅರಸೀಕೆರೆ ಸೇರಿದಂತೆ ವಿವಿದೆಡೆ ಇದೇ ರೀತಿ ಅಪರಾಧಗಳಲ್ಲಿ ಪಾಲ್ಗೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ.

ಕುವೆಂಪು ನಗರ ಠಾಣಾ ಪೊಲೀಸರ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಡಿಸಿಪಿ ಮುತ್ತುರಾಜ್ ಪ್ರಶಂಸಿಸಿದ್ದಾರೆ.

ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ.ಕೆ.ಆರ್.ಉಪವಿಭಾಗದ ಎಸಿಪಿ ಗಂಗಾಧರಸ್ವಾಮಿ ರವರ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಪಿಐ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಗೋಪಾಲ್,ಕು.ರಾಧಾ ಎಎಸ್ಸೈ ಗಳಾದ ಕಾಂತರಾಜು,ಮಹದೇವ,  ಸಿಬ್ಬಂದಿ ವಿರೂಪಾಕ್ಷ,ಮಂಜುನಾಥ್,ಆನಂದ್,ಪುಟ್ಟಪ್ಪ,ಹಜರತ್,ಸುರೇಶ್,ನಾಗೇಶ್ ಶ್ರೀನಿವಾಸ್  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.