ಡ್ರಗ್ಸ್ ಮಾಫಿಯಾ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು -ಹೆಚ್. ವಿಶ್ವನಾಥ್

ಮೈಸೂರು: ಡ್ರಗ್ಸ್ ಮಾಫಿಯಾ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಹೆಚ್. ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ನಮ್ಮ ಮಕ್ಕಳು, ನಮ್ಮ ಪಕ್ಷ, ನಮ್ಮ ಜಾತಿ ಎಂದು ತಪ್ಪಿತಸ್ಥರ ರಕ್ಷಣೆಗೆ ಮುಂದಾಗಬಾರದು. ಈ ದಂಧೆಯನ್ನು ಹತ್ತಿಕ್ಕಲೇ ಬೇಕು. ಯಾರಾ ್ಯರು ಇದ್ದಾರೆ ಅನ್ನೋದು ಬಹಿರಂಗವಾಗಬೇಕು ಎಂದರು.
ಕೋವಿಡ್ ಹೇಗೆ ಜಗತ್ತಿಗೆ ಆವರಿಸಿದೆ ಅದೇ ರೀತಿ ಡ್ರಗ್ಸ್ ಕೂಡ ಗೊತ್ತಿಲ್ಲದೆ ಆವರಿಸಿದೆ ಎಂದ ವಿಶ್ವನಾಥ್ ಯುವಕ, ಯುವತಿಯರು ಅರಿವಿಲ್ಲದೆ ಬಲಿಯಾಗುತ್ತಿದ್ದಾರೆಂದರು.
ಕಳಶಪ್ಪ ಬಂಡಿ ಮಗ ಹಾಗೂ ಹ್ಯಾರಿಸ್ ಮಗ ಇದಕ್ಕೆ ಉದಾಹರಣೆಯಾಗಿದ್ದಾರೆ. ಅವರಿಬ್ಬರ ನಡೆತ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಹ್ಯಾರಿಸ್ ಮಗ ಜೈಲಿಗೆ ಹೋಗಿ ಬಂದಿದ್ದು ಎಲ್ಲರಿಗೂ ಗೊತ್ತಾಗಿದೆ. ರಾಜಕಾರಣಿಗಳ ಮಕ್ಕಳು ತಪ್ಪು ಮಾಡಿದ್ರೆ ಅದನ್ನು ಸಮಾಜಕ್ಕೆ ಹೇಳುವ ಮನಸ್ಥತಿ ಇರಬೇಕು. ಯಾರ ಮಕ್ಕಳಾದರೂ ಸರಿ ಅವರನ್ನು ಕಾನೂನಿನ ಪ್ರಕಾರ ದಂಡಿಸಬೇಕು. ನನ್ನ ಮಗನಾದರೂ ಅಷ್ಟೇ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದರು.
ನನ್ನ ಮನೆಯಲ್ಲಿ ನನ್ನ ಮಗ ಏನ್ ಕುಡಿತಾನೋ ಏನ್ ತಗೋತಾನೋ ಗೊತ್ತಿಲ್ಲ. ಹಾಗಾಗಿ ಎಲ್ಲರೂ ಮಕ್ಕಳ ಬಗ್ಗೆ ಚಿಂತನೆ ಮಾಡಬೇಂದರು.
ಈ ದಂಧೆಯನ್ನು ಹತ್ತಿಕ್ಕಲೇ ಬೇಕು. ಯಾರಾ ್ಯರು ಇದ್ದಾರೆ ಅನ್ನೋದು ಬಹಿರಂಗವಾಗಬೇಕು. ರಾಜಕಾರಣಿಗಳ, ಚಿತ್ರರಂಗದವರ, ಉದ್ಯಮಿಗಳ ಮಕ್ಕಳ ಎಲ್ಲರಿಗೂ ತಿಳಿಯಬೇಕು ಎಂದರು.
ಪೆÇಲೀಸರಿಗೆ ಎಲ್ಲವೂ ಗೊತ್ತಿದೆ. ಆದರೂ ಅವರು ಗೊತ್ತಿಲ್ಲದರ ರೀತಿ ಇದ್ದಾರೆ. ಪೆÇಲೀಸರಿಗೆ ಯಾರನ್ನು ಬೊಟ್ಟು ಮಾಡಲು ಆಗ್ತಿಲ್ಲ. ಈ ದಂಧೆ ನಡೆಸೋರಿಗೆ ದೊಡ್ಡವರ ರಕ್ಷಣೆ ಸಿಗುತ್ತಿದೆ ಎಂದು ವಿಶ್ವನಾಥ್ ಹೇಳಿದರು.
ಪೆÇಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಸೆಲೆಬ್ರಿಟಿ ಮಾಡಿದ್ದಾನೆಂದು ಅವರು ತಿಳಿಸಿದರು.
ಇತ್ತೀಚೆಗೆ ಡ್ರಗ್ಸ್ ಅಂಡ್ ರೇವ್ ಪಾರ್ಟಿ ಮಾಡ್ತಿದ್ದಾರೆ. ಇದಕ್ಕೆಲ್ಲ ಸಿನಿಮಾಗಳೆ ಪ್ರೇರಣೆಯಾಗಿದೆ ಎಂದರು.
ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ವಿಶ್ವನಾಥ್ ಹೇಳಿದರು.