ಹುಟ್ಟುಹಬ್ಬ ಆಚರಣೆ ವಿಚಾರಕ್ಕೆ ಜಗಳ:ಯುವಕನಿಗೆ ಇರಿತ

ಮೈಸೂರು: ಹುಟ್ಟು ಹಬ್ಬ ಆಚರಿಸವ ವಿಚಾರದಲ್ಲಿ ಗಲಾಟೆ ನಡೆದು ಯುವಕನಿಗೆ ಚಾಕುವಿನಿಂದ ಇರಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಪಟ್ಟಣದ ನೀಲಕಂಠನಗರದಲ್ಲಿ ಘಟನೆ ನಡೆದಿದ್ದು,ಪ್ರಸಾದ್ (22) ಚಾಕು ಇರಿತದಿಂದ ಗಾಯಗೊಂಡಿದ್ದಾನೆ.

ಒಂದು ಗುಂಪು ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಇನ್ನೊಂದು ಗುಂಪು ಆಕ್ಷೇಪ ವ್ಯಕ್ತಪಡಿಸಿ ಇಲ್ಲಿ ಹುಟ್ಟುಹಬ್ಬ ಆಚರಿಸಬೇಡಿ ಎಂದುದಕ್ಕೆ ಜಗಳ ನಡೆದಿದೆ.

ಆಕ್ಷೇಪ ವ್ಯಕ್ತಪಡಿಸಿದ ಪ್ರಸಾದ್ ಮೇಲೆ ಜಗಳ ತೆಗೆದು ಗುಂಪು ಚಾಕುವಿನಿಂದ ಇರಿದಿದ್ದಾರೆಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಶೋಹೆಬ್, ಶಹೇನಸಾ, ಸಲ್ಮಾನ್, ಇಲ್ಲು ಹಾಗೂ ಜಾಫರ್ ವಿರುದ್ದ ಪ್ರಕರಣ ದಾಖಲಾಗಿದೆ.

ನಂಜನಗೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.