ಮೈಸೂರು: ಮೈಸೂರಿನ ನಾಗರಹೊಳೆ ಅಭಯಾರಣ್ಯದ ದಮ್ಮನ ಕಟ್ಟೆಯಲ್ಲಿ ಅಪರೂಪದ ಕಪ್ಪುಚಿರತೆ ದರ್ಶನ ಕೊಟ್ಟಿದೆ.
ಹಲವು ದಿನಗಳ ಬಳಿಕ ಸಫಾರಿ ಪ್ರಿಯರಿಗೆ ಬ್ಲ್ಯಾಕ್ ಪ್ಯಾಂಥರ್ ದರ್ಶನವಾಗಿದೆ.
ನಾಗರಹೊಳೆ ದಮ್ಮನಕಟ್ಟೆ ರೇಂಜ್ ನಲ್ಲಿ ಪ್ರಖ್ಯಾತಿ ಹೊಂದಿರುವ ಬ್ಲಾಕ್ ಪ್ಯಾಂಥರ್ ಕಣ್ ತುಂಬಿಕೊಳ್ಳಲು ಪ್ರವಾಸಿಗರು ಚಾತಕ ಪಕ್ಷಿಗಳಂತೆ ಕಾಯುತ್ತಾರೆ ಆದರೆ ಇದು ಸಧ್ಯಕ್ಕೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಎಲ್ಲರಿಗೂ ಬ್ಲ್ಯಾಕ್ ಪ್ಯಾಂಥರ್ಸ್ ಅಚ್ಚು ಮೆಚ್ಚು.
ಇಡೀ ಕರ್ನಾಟಕದಲ್ಲಿ ಸಫಾರಿ ಪ್ರಿಯರಿಗೆ ದಮ್ಮನಕಟ್ಟೆ ರೇಂಜ್ ಬಹಳ ಇಷ್ಟ,ಬ್ಲ್ಯಾಕ್ ಪ್ಯಾಂಥರ್ಸ್ ಇರುವ ಭಾಗದಲ್ಲಿ ಇದು ಮೊದಲ ಸ್ಥಾನದಲ್ಲಿದೆ.
ಹಿಂದೆ ಇವುಗಳು ಒಟ್ಟೊಟ್ಟಾಗಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಹಲವು ದಿನಗಳಿಂದ ದರ್ಶನ ಸಿಗದ ಹಿನ್ನಲೆ ಸಫಾರಿ ಪ್ರಿಯರು ಬೇಸರಗೊಂಡಿದ್ದರು.
ಇದೀಗ ಕಪ್ಪು ಚಿರತೆ ಮತ್ತೆ ಕಾಣಿಸಿಕೊಂಡು ಪ್ರವಾಸಿಗರ ಮನಸೆಳೆಯಲಿದೆ.