ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ಯೋಗೋತ್ಸವ

ಮೈಸೂರು: ವಿಶ್ವ ಯೋಗ ದಿನಾಚರಣೆಗೆ ಸಿದ್ದತೆ ನಡೆದಿದ್ದು, ಮೈಸೂರಿನ ಮಹಾಜನ ಪ್ರಥಮದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯೋಗೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಆಯುಷ್ ಸಚಿವಾಲಯ, ನವದೆಹಲಿಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಮಹಾಜನ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಈ ಕಾರ್ಯಕ್ರಮ ಆಯೋಜಿಸಿದ್ದವು.

ಕಾರ್ಯಕ್ರಮವನ್ನು ಮೈಸೂರು ಮೇಯರ್ ಶಿವಕುಮಾರ್ ಉದ್ಘಾಟಿಸಿದರು.

ಯೋಗಾಭ್ಯಾಸದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಕುರಿತು ವೇದವ್ಯಾಸ ಯೋಗ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ಕೆ.ರಾಘವೇಂದ್ರ ಪೈ ತಿಳಿಸಿದರು.

ಯೋಗೋತ್ಸವದ ಅಂಗವಾಗಿ ʼಮೈಸೂರಿನ ಯೋಗಪರಂಪರೆ ಮತ್ತು ಭಗವದ್ಗೀತೆಯಲ್ಲಿ ಯೋಗʼ ಎಂಬ ವಿಷಯಗಳ ಕುರಿತು ವಸ್ತು ಪ್ರದರ್ಶನ ಕೂಡಾ ಏರ್ಪಡಿಸಲಾಗಿತ್ತು.

ವಸ್ತು ಪ್ರದರ್ಶನವನ್ನು ಎಕ್ಸೆಪ್ ಸಾಫ್ಟ್ ಟೆಕ್ನಾಲಜೀಸ್ ನ ಸಿಇಒ ಮತ್ತು ಸಂಸ್ಥಾಪಕ ಡಿ.ಸುಧನ್ವ ಉದ್ಘಾಟಿಸಿದರು.

ಯೋಗದ ಕುರಿತು ವಿದ್ಯಾರ್ಥಿಗಳಿಗೆ ಸ್ವಾಮಿ ಮಹಮೇದಾನಂದಜಿ ಮಹಾರಾಜ್ ಉಪನ್ಯಾಸ ನೀಡಿದರು.

ಯೋಗಾಚಾರ್ಯ  ಡಾ.ಪಿ.ಎನ್ ಗಣೇಶ್  ವಿದ್ಯಾರ್ಥಿಗಳಿಗೆ ಓದಿನಲ್ಲಿ ಎದುರಾಗುವ ಸವಾಲುಗಳಿಗೆ ಯೋಗೋಪಾಯಗಳ ಕುರಿತು ಉಪನ್ಯಾಸ ನೀಡಿದರು.

ಮಹಾಜನ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಆರ್.ಜಯಕುಮಾರಿ, ಮಹಾಜನ ಶಿಕ್ಷಣಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮಿ ಮುರಳೀಧರ, ಕಾರ್ಯಕ್ರಮ ಸಂಚಾಲಕ ಡಾ.ಹೆಚ್.ಆರ್. ತಿಮ್ಮೇಗೌಡ ಮತ್ತಿತರರು ಪಾಲ್ಗೊಂಡಿದ್ದರು.