27 ಲಕ್ಷ ಹಣ,308‌ ಗ್ರಾಂ ಚಿನ್ನಾಭರಣ ಕಳವು: ಪಕ್ಕದ ಮನೆಯ ತಾಯಿ ಮಗಳ ಕೈ ಚಳಕ

ಮೈಸೂರು: ಯಾರೇ ಆಗಲಿ ತಮ್ಮ ಅಕ್ಕ,ಪಕ್ಕದವರನ್ನು‌‌ ಅತಿ ಹೆಚ್ಚಾಗಿ ನಂಬಿದರೆ ಅದು ಯಾವಾಗಾದರೂ ಯಡವಟ್ಟು ಕಟ್ಟಿಟ್ಟ ಬುತ್ತಿ.ಇದಕ್ಕೆ ಇಲ್ಲೊಂದು ಸ್ಪಷ್ಟ ಉದಾಹರಣೆ ಇದೆ.

ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇಟ್ಟಿದ್ದ 27 ಲಕ್ಷ ನಗದು ಹಾಗೂ 308 ಗ್ರಾಂ ಚಿನ್ನಾಭರಣ ಕಳುವಾದ ಘಟನೆ ಮೈಸೂರು ಜಿಲ್ಲೆ ಬನ್ನೂರಿನ ಹೊರಕೇರಿ ವಾರ್ಡ್ ನಲ್ಲಿ ನಡೆದಿದೆ.

ಗೋವಿಂದ ಎಂಬುವರ ಮನೆಯ ಬೀರು ಬಾಗಿಲು ಮುರಿದಿರುವ ಚಾಲಾಕಿಗಳು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಈ ಕೆಟ್ಟ ಕೆಲಸ‌ವನ್ನ ಪಕ್ಕದ ಮನೆಯವರೇ ಮಾಡಿದ್ದಾರಂತೆ.

ಅದಕ್ಕೇ ದೊಡ್ಡವರು ಹೇಳಿರೋದು ಯಾರನ್ನೂ ನಂಬಬಾರದು ಅಂತಾ.

ತಮ್ಮ ಮನೆಗೆ ಹೊಂದಿಕೊಂಡಂತೆ ಮತ್ತೊಂದು ಮನೆಯಲ್ಲಿ ವಾಸ ಮಾಡುತ್ತಿರುವ ತಾಯಿ ಮಗಳು ಕಳ್ಳತನ ಮಾಡಿರುವುದಾಗಿ ಗೋವಿಂದ ಅವರು ಬನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜೂ 5 ರಂದು ಗೋವಿಂದ ಕುಟುಂಬದವರು ಮತ್ತು ಅವರ ಸಹೋದರನ ಕುಟುಂಬದವರು ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು.

ಜೂನ್ 6 ರಂದು ಹಿಂದಿರುಗಿದಾಗ ಮನೆಯಲ್ಲಿದ್ದ ಲಾಕರ್ ಬೀಗ ಮುರಿದಿದ್ದು ಅದರಲ್ಲಿದ್ದ 27 ಲಕ್ಷ ನಗದು ಹಾಗೂ 308 ಗ್ರಾಂ ಒಡವೆಗಳು ನಾಪತ್ತೆಯಾಗಿದ್ದುದು ಗೊತ್ತಾಗಿದೆ.

ಅಕ್ಕನ ಮಗನ ಮದುವೆಗೆ ಉಡುಗೊರೆಯಾಗಿ ನಿವೇಶನ ಖರೀದಿಸುವ ಸಲುವಾಗಿ ಗೋವಿಂದ ಹಣವನ್ನ ಹೊಂದಿಸಿ ಇಟ್ಟಿದ್ದರು.

ಈ ವಿಚಾರ ಮುಂದಿನ ಮನೆಯಲ್ಲಿದ್ದ ತಾಯಿ ಮಗಳಾದ ಮೀನಾಕ್ಷಮ್ಮ ಹಾಗೂ ರತ್ನ ಇಬ್ಬರಿಗೆ ಮಾತ್ರ ತಿಳಿದಿತ್ತು.

ಮನೆಯ ಸದಸ್ಯರಂತೆ ಗೋವಿಂದ ಮನೆಯವರ ಜೊತೆ ಇವರು ಆತ್ಮೀಯವಾಗಿದ್ದರು.

ನಗದು ಮತ್ತು ಒಡವೆಗಳನ್ನ ಮೀನಾಕ್ಷಮ್ಮ ಹಾಗೂ ರತ್ನ ರವರೇ ಕಳವು ಮಾಡಿದ್ದಾರೆಂದು ಗೋವಿಂದ ಆರೋಪಿಸಿದ್ದಾರೆ ಹಾಗೂ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.