ಚಾಮರಾಜನಗರ ಡಿವೈಸ್ಪಿ ಮೋಹನ್ ಅಮಾನತು

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರ ವಿಭಾಗದ ಡಿವೈಸ್ಪಿ ಮೋಹನ್ ಅವರನ್ನ ಸರ್ಕಾರ ಅಮಾನತು ಪಡಿಸಲಾಗಿದೆ.
ಡಿವೈಸ್ಪಿ ಮೋಹನ್ ಅವರನ್ನ ಬುಧವಾರ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚಿಗೆಷ್ಟೆ ಜಿಲ್ಲೆಯ ಮಸಗಾಪುರದ ಬಳಿ ನಡೆದ ಲಾರಿ-ಟಿಪ್ಪರ್ ಅಪಘಾತದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಘಟನೆ ಬಗ್ಗೆ ದಕ್ಷಿಣ ವಲಯ ಪೆÇಲೀಸ್ ಮಹಾನಿರ್ದೇಶಕರಾದ ವಿಪುಲ್ ಕುಮಾರ್ ಅವರು ಗ್ರಾಮಾಂತರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಮಂಜು, ಪೂ. ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸುನೀಲ್, ಮುಖ್ಯ ಪೇದೆ ನಾಗನಾಯ್ಕ್ ಅವರನ್ನ ಅಮಾನತು ಮಾಡಿದ್ದರು.
ವಿಚಾರಣೆಯಲ್ಲಿ ಚಾಮರಾಜನಗರ ವಿಭಾಗದ ಡಿವೈಸ್ಪಿ ಅವರು ಕರ್ತವ್ಯ ಲೋಪ ಎಸಗಿರುವುದನ್ನ ಮನಗಂಡು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿತ್ತು.
ವರದಿ ಆಧರಿಸಿ ಡಿವೈಸ್ಪಿ ಮೋಹನ್ ಅವರನ್ನ ಸೇವೆಯಿಂದ ಅಮಾನತು ಮಾಡಿ ಸರಕಾರ ಆದೇಶ ಹೊರಡಿಸಿದೆ.