ಮೈಸೂರು: ಚಾರ್ಜಿಂಗ್ ಪಾಯಿಂಟ್ ಗೆ ಅನುಮತಿ ನೀಡಲು ಲಂಚ ಪೀಕಿಸಿದ್ದ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
49 ಕಿಲೋ ವ್ಯಾಟ್ ಚಾರ್ಜಿಂಗ್ ಪಾಯಿಂಟ್ ಗೆ ಅನುಮತಿ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದ ಕುಶಾಲನಗರ ಎಇಇ ಅಶೋಕ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೈಸೂರಿನ ವಿಜಯನಗರ ನಿವಾಸದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.