ಇಬ್ಬರು ಲೋಕೋಪಯೋಗಿ ಇಂಜಿನಿಯರ್ ಲೋಕಾ ಬಲೆಗೆ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಲೋಕಾಯುಕ್ತ
ಚಾಮರಾಜನಗರ ವಿಭಾಗದ
ಅಧಿಕಾರಿಗಳು ಮಿಂಚಿನ ಕಾರ್ಯಚರಣೆ‌ ನಡೆಸಿ ಇಬ್ಬರು ಲೋಕೊಪಯೋಗಿ ಇಲಾಖೆ ಇಂಜಿನಿಯರ್ ಗಳನ್ನು ಬಲೆಗೆ ಬೀಳಿಸಿದ್ದಾರೆ.

ಚಾಮರಾಜನಗರ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಧುಸೂದನ್ ಹಾಗೂ ಕೆಂಪರಾಜು ಎಂಬುವರು ಲೋಕಾಯುಕ್ತ ಪೋಲೀಸರ ಬಲೆಗೆ ಸಿಲುಕಿದ್ದಾರೆ.

ಕುದೇರು ಠಾಣಾ ವ್ಯಾಪ್ತಿಯಲ್ಲಿರುವ ಬಾಗಳಿ ಗ್ರಾಮದ ಶಾಲಾ ಕಾಮಗಾರಿ ಪರಿಶೀಲನೆ ನಡೆಸಿ ಗುತ್ತಿಗೆದಾರ ಸುನೀಲ್ ಕುಮಾರ್ ಎಂಬುವರಿಂದ‌ ೩೦ ಸಾವಿರ ಸ್ವೀಕರಿಸಿ ಬರುತ್ತಿದ್ದ ಇಂಜಿನಿಯರ್ ಗಳನ್ನ ಅಡ್ಡಗಟ್ಟಿ ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ.

ಡಿ ವೈಎಸ್ ಪಿ ಮ್ಯಾಥ್ಯೂಸ್, ಇನ್ಸ್ ಪೆಕ್ಟರ್ ಗಳಾದ ರವಿಕುಮಾರ್ ಹಾಗೂ ಶಶಿಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.

ಇಂಜಿನಿಯರ್ ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಸಮೀಪದ ಚಾಮುಲ್ ಕೇಂದ್ರಕ್ಕೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.