ಮೈಸೂರು: ಮೈಸೂರು ನಗರದಲ್ಲಿ ಇಂಟರ್ ನೆಟ್ ಕೇಬಲ್ ಗಳ ಹಾವಳಿ ಹೆಚ್ಚಾಗುತ್ತಿದೆ.
ವಿದ್ಯುತ್ ಕಂಬಗಳ ಮೇಲೆ ಹಾದು ಹೋಗಿರುವ ಕೇಬಲ್ ಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು,ಚೆಸ್ಕಾಂ ಅಧಿಕಾರಿಗಳು
ಇದರ ಪರಿವೆಯೇ ಇಲ್ಲದವರಂತೆ ಇದ್ದಾರೆ.
ಹಲವೆಡೆ ಕೇಬಲ್ ಗಳು ಜೋತು ಬಿದ್ದು ಭೀತಿ ಹುಟ್ಟಿಸುತ್ತಿವೆ,ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮನವಿ ಮಾಡಿದ್ದರೂ ಚೆಸ್ಕಾಂ ಅಧಿಕಾರಿಗಳು ಕ್ಯಾರೇ ಅಂದಿಲ್ಲಾ.
ಅನಾಹುತ ಸಂಭವಿಸಿದಲ್ಲಿ ಏನು ಮಾಡುವುದು ಎಂಬ ಆತಂಕದಲ್ಲಿದ್ದಾರೆ ಜನ.
ಈ ವಿಚಾರ ಶುಕ್ರವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲೂ ಪ್ರತಿಧ್ವನಿಸಿದೆ.
ಈ ಅನಧಿಕೃತ ವೈರ್ ಹಾಗೂ ಬಾಕ್ಸ್ ಗಳನ್ನು ತೆರವುಗೊಳಿಸುವಂತೆ ಗಡುವು ನೀಡಿದ್ದರೂ ಯಾರೂ ಅಧಿಕಾರಿಗಳ ಗಡುವಿಗೆ ಕೇರ್ ಮಾಡಿಲ್ಲ,ಅಷ್ಟೇ ಅಲ್ಲಾ ಕೇಬಲ್ ಅಳವಡಿಕೆ ಕಾರ್ಯ ರಾಜಾರೋಷವಾಗಿ ಸಾಗುತ್ತಿದೆ.
ಇದನ್ನೆಲ್ಲ ಕಂಡು ಇದೀಗ ಪುರಪಿತೃಗಳು ಎಚ್ಚೆತ್ತುಕೊಂಡಿದ್ದು, ಖಾಸಗಿ ಕೇಬಲ್ ನೆಟ್ ವರ್ಕ್ ಗಳ ವಿರುದ್ದ ಸಿಡಿದೆದ್ದಿದ್ದಾರೆ.
ಕಾರ್ಪೊರೇಟರುಗಳು ಅದೇನು ಮಾಡಿಯಾರೋ, ಈ ಅನಧಿಕೃತ ನೆಟ್ವರ್ಕ್ ಕೇಬಲ್ ತೆರವಿಗೆ ಏನು ಕ್ರಮ ಕೈಗೊಳ್ಳುವರೊ ಕಾದು ನೋಡಬೇಕಿದೆ.
ಅನಾಹುತ ಸಂಭವಿಸುವ ಮುನ್ನ ಚೆಸ್ಕಾಂ ಅಧಿಕಾರಿಗಳು ಎತ್ತೆಚ್ಚು ಕ್ರಮ ಕೈಗೊಳ್ಳುವರೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.