ವಕೀಲರ ಮನೆಗೆ ಕನ್ನ ಹಾಕಿದ್ದ ಐವರು ಖದೀಮರು ಅಂದರ್

ಮೈಸೂರು: ವಕೀಲರೊಬ್ಬರ ಮನೆಗೆ ಕನ್ನ ಹಾಕಿ 6 ಲಕ್ಷ ನಗದು ದೋಚಿದ್ದ ಐದು ಮಂದಿ ಕಳ್ಳರು ಕಂಬಿ ಎಣಿಸುತ್ತಿದ್ದಾರೆ.

ಈ ಕತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅನಿಲ್ ಕುಮಾರ್,ನರೇಂದ್ರ,ಪುಟ್ಟಸ್ವಾಮಿ,
ಅಭಿಷೇಕ್,ಪ್ರಕಾಶ್ ಬಂಧಿತ ಆರೋಪಿಗಳು

ಯೋಗಾನಂದ್@ಉಪೇಂದ್ರ ಎಂಬ‌ ಆರೋಪಿ ತಲೆ ಮರೆಸಿಕೊಂಡಿದ್ದು,ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತರಿಂದ 2 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 20 ಲಕ್ಷ ಮೌಲ್ಯದ ಒಂದು ಕಾರು, 40 ಸಾವಿರ ಮೌಲ್ಯದ ಆಕ್ಟಿವಾ ಹೋಂಡ,5 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೇ 3 ರಂದು ಶ್ರೀರಾಂಪುರ ಬಡಾವಣೆಯಲ್ಲಿರುವ ಹಿರಿಯ ವಕೀಲರಾದ ಜಯಪ್ರಕಾಶ್ ರಾವ್ ಅವರ ಮನೆಯ ಬಾಗಿಲು ಮೀಟಿ ಈ ಆರೋಪಿಗಳು 6 ಲಕ್ಷ ನಗದು ದೋಚಿದ್ದರು.

ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಠಾಣೆ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

ಕೃತ್ಯ ನಡೆದ ನಂತರ ಸಿಸಿ ಕ್ಯಾಮರಾ ಫುಟೇಜ್ ಗಳನ್ನ ಆಧರಿಸಿ ಕಾರ್ಯಾಚರಣೆ ನಡೆಸಿದ ಕುವೆಂಪುನಗರ ಪೊಲೀಸರು ಐದು ಮಂದಿಯನ್ನು‌ ಕಂಬಿ ಹಿಂದೆ‌ ಹಾಕಿದ್ದಾರೆ.

ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದ ಆರೋಪಿಗಳು ಕಳ್ಳತನ ಮಾಡುತ್ತಿದ್ದರೆಂದು ವಿಚಾರಣೆ‌ ವೇಳೆ ಗೊತ್ತಾಗಿದೆ.

ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಯೋಗಾನಂದ ನೊಟೋರಿಯಸ್,ಈತನ ವಿರುದ್ದ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.ಡಕಾಯಿತಿ,ರಾಬರಿ,ಕನ್ನಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದುದು ತನಿಖೆಯಿಂದ ತಿಳಿದುಬಂದಿದೆ.

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೆ.ಆರ್.ಉಪವಿಭಾಗದ ಎಸಿಪಿ ಗಂಗಾಧರ ಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆಯ ಇನ್ಸ್ ಪೆಕ್ಟರ್ ಅರುಣ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಪಿಐ ಗಳಾದ ಗೋಪಾಲ್,ಕು.ರಾಧ ಹಾಗೂ ಸಿಬ್ಬಂದಿಗಳಾದ ಕುಮಾರ್,ಮಂಜುನಾಥ,ಆನಂದ,ಪುಟ್ಟಪ್ಪ,ಹಜರತ್,ಸುರೇಶ್,ನಾಗೇಶ್,ಶ್ರೀನಿವಾಸ್,ಅಮೋಘ್ ಅವರುಗಳು ಕಾರ್ಯಾಚರಣೆ ಪಾಲ್ಗೊಂಡಿದ್ದರು.

ಪೊಲೀಸರ ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಉಪಪೋಲೀಸ್ ಆಯುಕ್ತರಾದ ಎಂ.ಮುತ್ತುರಾಜ್ ಪ್ರಶಂಸಿಸಿದ್ದಾರೆ.