ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ.
ಇದ್ದನ್ನು ಟ್ವಿಟ್ಟರ್ ಸಂಸ್ಥೆ ಗುರುವಾರ ದೃಢಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಖಾತೆ ಹ್ಯಾಕ್ ಆಗಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಟ್ಟಿಟ್ಟರ್ ಸಂಸ್ಥೆ ತಿಳಿಸಿ, ಖಾತೆ ಸುರಕ್ಷಿತಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ.
ಕ್ರಿಪೆÇ್ಟೀಕರೆನ್ಸಿ ಮೂಲಕ ಪಿಎಂ ನ್ಯಾಷನಲ್ ರಿಲೀಫ್ ಫಂಡ್ ಗೆ ದೇಣಿಗೆ ನೀಡಬೇಕೆಂದು ಕೇಳಿ ಸರಣಿ ಟ್ವೀಟ್ ಗಳನ್ನ ಮಾಡಲಾಗಿತ್ತು.
ಇದಾದ ಬಳಿಕ ಅವರ ಖಾತೆ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿದೆ. ಈಗ ಖಾತೆಯನ್ನು ಮರಳಿ ಪಡೆಯಲಾಗುತ್ತಿದ್ದು ಆ ಸರಣಿ ಟ್ವೀಟ್ ಗಳನ್ನ ಡಿಲೀಟ್ ಮಾಡಲಾಗಿದೆ ಎಂದು ಟ್ಟಿಟ್ಟರ್ ಸಂಸ್ಥೆ ತಿಳಿಸಿದೆ.