ಮೈಸೂರು: ಟಿಂಬರ್ ಮರ್ಚೆಂಟ್ ಮಾಲೀಕರ ಮನೆಯಲ್ಲಿ 47 ಲಕ್ಷ ನಗದು 100 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಮೈಸೂರಿನ ದೇವನೂರು ಬಡಾವಣೆಯಲ್ಲಿ ನಡೆದಿದೆ.
ಮೊಮ್ಮೊಗಳ ಮದುವೆಗಾಗಿ ಇಡೀ ಕುಟುಂಬ ಬೆಂಗಳೂರಿಗೆ ಹೋಗಿದ್ದ ವೇಳೆ ಕಳ್ಳರು ಸಿಸಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿ ಈ ಕೃತ್ಯ ಎಸಗಿದ್ದಾರೆ.
ವಾಚ್ ಮನ್ ಇದ್ದರೂ ಖದೀಮರು ಈ ಕೃತ್ಯ ಎಸಗಿರುವುದು ಅಚ್ಚರಿ ಮೂಡಿಸಿದೆ.
ಸೈಯದ್ ಮುಕ್ತಾರ್ ಅಹಮದ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಜೂನ್ 7 ರಂದು ಮುಕ್ತಾರ್ ರವರ ಮೊದಲ ಮಗಳ ಮಗಳ ಮದುವೆಗಾಗಿ ಇಡೀ ಕುಟುಂಬ ಬೆಂಗಳೂರಿಗೆ ಹೋಗಿತ್ತು.
ಮನೆಯ ಮೊದಲ ಅಂತಸ್ತಿನಲ್ಲಿರುವ ಕೊಠಡಿಯ ಬೀರುವಿನಲ್ಲಿ ಹಣ ಹಾಗೂ ಒಡವೆಗಳನ್ನ ಇಡಲಾಗಿತ್ತು.
ವಾಚ್ ಮನ್ ಗೆ ಮನೆ ಜವಾಬ್ದಾರಿ ಬಿಟ್ಟು ಕುಟುಂಬ ತೆರಳಿತ್ತು.ಶನಿವಾರ ರಾತ್ರಿ ಪಕ್ಕದ ಮನೆಯವರು ಮುಕ್ತಾರ್ ರವರಿಗೆ ಫೋನ್ ಮಾಡಿ ನಿಮ್ಮ ಮನೆ ಮೊದಲ ಮಹಡಿ ಬಾಗಿಲು ತೆರೆದಿದ್ದು ಗಾಳಿಗೆ ಹೊಡೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕೂಡಲೇ ಮೈಸೂರಿಗೆ ಧಾವಿಸಿ ಪರಿಶೀಲನೆ ನಡೆಸಿದಾಗ ಬೀರುವಿನಲ್ಲಿದ್ದ 47 ಲಕ್ಷ ನಗದು,4 ಲಕ್ಷ ಮೌಲ್ಯದ 100 ಗ್ರಾಂ ಒಡವೆ ಹಾಗೂ 4 ಸಾವಿರ ಮೌಲ್ಯದ ಒಂದು ಟೈಟಾನ್ ವಾಚ್ ಕಳುವಾಗಿರುವುದು ಗೊತ್ತಾಗಿದೆ.
ಬೆರಳಚ್ಚು ತಜ್ಞರು ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.