ಮೈಸೂರು: ಕಳ್ಳರು ಹಣ್ಣಿನ ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಗಲ್ಲಾಪೆಟ್ಟಿಗೆಯಲ್ಲಿದ್ದ 1.30 ಲಕ್ಷ ರೂ ದೋಚಿರುವ ಘಟನೆ ಮೈಸೂರಿನ ಆರ್ ಎಂ ಸಿ ಯಾರ್ಡ್ ನಲ್ಲಿ ನಡೆದಿದೆ.
ಮೂವರು ಖತರ್ ಕಳ್ಳರು ಈ ಕೃತ್ಯ ಎಸಗಿದಗದಾರೆ.
ಕಮಿಷನ್ ಏಜೆಂಟ್ ಅಯಾಜ್ ಎಂಬವರಿಗೆ ಸೇರಿದ ಆರ್‌ಎಂ ಸಿಯ ಸ್ಟಾಲ್ ನಂ 72 ರಲ್ಲಿ ಘಟನೆ ನಡೆದಿದೆ.
ಹೋಲ್ ಸೇಲ್ ದರದಲ್ಲಿ ಹಣ್ಣು ಖರೀದಿಸುವ ಸೋಗಿನಲ್ಲಿ ಬಂದ ಖದೀಮರು ಮಾಲೀಕರ ಗಮನವನ್ನ ಬೇರೆಡೆ ಸೆಳೆದು ಹಣ ಲಪಟಾಯಿಸಿದ್ದಾರೆ.
ಈ ಸಂಭಂಧ ಮಂಡಿ ಪೊಲೀಸರು ದೂರು ದಾಖಲಿಸಿದ್ದಾರೆ.
ಖದೀಮರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಶೀಘ್ರವೆ ಕಳ್ಳರನ್ನು ಸೆರೆಹಿಡಿಯುವುದಾಗಿ ಪೊಲೀಸರು ತಿಳಿಸಿದ್ದಾರೆ.