ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಸೋಂಕು

ನಟಿ ಶರ್ಮಿಳಾ ಮಾಂಡ್ರೆ ಸೇರಿದಂತೆ ಕುಟುಂಬದ ಹಲವರಿಗೆ ಕೋವಿಡ್ ಸೋಂಕು ದೃಢ
ಬೆಂಗಳೂರು: ನಟಿ ಶರ್ಮಿಳಾ ಮಾಂಡ್ರೆ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ.
ಕೆಲ ದಿನಗಳ ಹಿಂದೆ ತಮಗೆ ಕೋವಿಡ್ ಸೋಂಕು ಲಕ್ಷಣಗಳು ಕಂಡು ಬಂದಿದೆ. ಕ್ವಾರಂಟೈನ್ ಆಗಿರುವುದಾಗಿಯೂ ಶರ್ಮಿಳಾ ಮಾಂಡ್ರೆ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಶರ್ಮಿಳಾ ಮಾಂಡ್ರೆ ಅವರೇ ಗುರುವಾರ ಟ್ವೀಟ್ ಮಾಡಿ, ನನಗೂ ಮತ್ತು ನನ್ನ ಕುಟುಂಬದ ಕೆಲವರಿಗೆ ಕೋವಿಡ್ ಸೋಂಕು ದೃಢವಾಗಿದೆ. ನಾವು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇವೆ. ವೈದ್ಯರು ಹೇಳಿದಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆದು ಕೊಂಡಿದ್ದಾರೆ.