ಮೈಸೂರು: ತಂಗಿಯನ್ನ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಅಣ್ಣ ತಂಗಿಯ ಪ್ರಿಯಕರನನ್ನು ಸ್ನೇಹಿತರೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಹೇಮಂತ್ ಅಲಿಯಾಸ್ ಸ್ವಾಮಿ (23) ಹತ್ಯೆಯಾಗಿರುವ ಪ್ರೇಮಿ.
ಹೇಮಂತನನ್ನು ಕಲ್ಲಿನಿಂದ ಜಜ್ಜಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಆತ ಬೈಕ್‌ನಲ್ಲಿ ಬರುತ್ತಿದ್ದಾಗ ಮೂವರು ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದಾರೆ.
ಸಾಗರ್,ಪ್ರತಾಪ್ ಹಾಗೂ ಮಂಜು ಕೊಲೆ ಮಾಡಿದ ಆರೋಪಿಗಳು.
ಸಾಗರ್ ಸಹೋದರಿಯನ್ನು ಸ್ವಾಮಿ ಪ್ರೀತಿಸುತ್ತಿದ್ದ.
ಈ ವಿಚಾರಕ್ಕೆ ಸಾಗರ್ ಹಾಗೂ ಸ್ವಾಮಿ ನಡುವೆ ಜಗಳವಾಗಿ ದ್ವೇಶ ಬೆಳೆದಿತ್ತು.
ಕಡೆಗೆ ಸಾಗರ್ ಸ್ನೇಹಿತರ ಜೊತೆ ಸೇರಿ ಸ್ವಾಮಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ವಿಜಯನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.