ಮಕ್ಕಳ ಅನುಕೂಲಕ್ಕೆ ಪಠ್ಯ ಬದಲಾಯಿಸಿದರೆ ತಪ್ಪೇನು? -ಗೀತಾ

ಮೈಸೂರು : ಮಕ್ಕಳ ಅನುಕೂಲಕ್ಕಾಗಿ ಪಠ್ಯ ಬದಲಾಯಿಸಿದರೆ ತಪ್ಪೇನು ಇಲ್ಲ ಎಂದು ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಮೈಸೂರಿನ ಶಕ್ತಿಧಾಮದ ಮಕ್ಕಳನ್ನು ಪಕ್ಷಿವೀಕ್ಷಣೆಗೆ ಕರೆತಂದಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಪಠ್ಯಪುಸ್ತಕದಲ್ಲಿ ಒಳ್ಳೆಯ ವಿಚಾರಗಳು ಮಾತ್ರ ಇರಬೇಕು, ಈ ಕಾರಣಕ್ಕಾಗಿ ಪಠ್ಯಪುಸ್ತಕ ಬದಲಾವಣೆ ಆದರೆ ಒಳ್ಳೆಯದೆ ಎಂದು ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.

ಇದೇ ವೇಳೆ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಏನನ್ನೂ ಹೇಳದೆ

ಕುತೂಹಲ ಕಾಯ್ದುಕೊಂಡರು ಗೀತಾ ಶಿವರಾಜ್ ಕುಮಾರ್, ಪಕ್ಷಿ ವೀಕ್ಷಣೆಗೆ ಬಂದಿದ್ದೇವೆ ಇಲ್ಲಿ ರಾಜಕೀಯ ವಿಚಾರ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ಮೈಸೂರಿನಲ್ಲಿರುವ ಶಕ್ತಿ ಧಾಮದ ಮಕ್ಕಳು ಕುಕ್ಕರಳ್ಳಿ ಕೆರೆಯ ಪ್ರಕೃತಿ ‌ಮಡಿಲಲ್ಲಿ ಆಡಿ,ಕುಣಿದು ಸಂಭ್ರಮಿಸಿ, ಬೆಳಗ್ಗೆ ಪ್ರಕೃತಿ ಸೌಂದರ್ಯದ ನಡುವೆ ಪಕ್ಷಿ ವೀಕ್ಷಣೆ ಮಾಡಿ ಖುಷಿ ಪಟ್ಟರು.

ಶಕ್ತಿಧಾಮದ ಅಧ್ಯಕ್ಷೆ, ಚಲನಚಿತ್ರ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಶಾಲಾ ಮಕ್ಕಳು

ಬೆಳಗ್ಗೆ ಬರ್ಡ್ ವಾಚಿಂಗ್ ಮಾಡಿದರು.

9,10 ನೇ ತರಗತಿಯ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಕ್ಷಿ ವೀಕ್ಷಣೆ ಮಾಡಿದರಲ್ಲದೆ ಪಕ್ಷಿ ತಜ್ಞ ದಿನೇಶ್ ಕುಮಾರ್ ರಿಂದ ಮಾರ್ಗದರ್ಶನ ಪಡೆದರು.

ಪಕ್ಷಿಗಳ ಜೀವನದ ಬಗ್ಗೆ ಕುತೂಹಲದಿಂದ ಆಲಿಸಿ ಮಾಹಿತಿ  ಪಡೆದರು. ಕಿಂಗ್ ಫಿಶರ್, ಹೆಜ್ಜಾರ್ಲೆ, ಪೇಯಿಂಟೆಡ್ ಶಾರ್ಕ್, ಕೊಕ್ಕರೆ,ಬಾರ್ ಹೆಡೆಡ್ ಗೂಸ್, ಕೂಟ್, ಮುಂತಾದ ಪಕ್ಷಿಗಳನ್ನು ನೋಡಿ ಮಕ್ಕಳು ಸಂಭ್ರಮಿಸಿದರು.