ಮೈಸೂರಿನ ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾ ಬ್ಯಾಟರಿ, ಯುಪಿಎಸ್ ಕಳುವು

ಮೈಸೂರು: ಸಿಸಿ ಕ್ಯಾಮೆರಾಗಳು ಇದ್ದರೆ ತಾನೆ ಕಳ್ಳತನ ಮಾಡೋದು ಗೊತ್ತಾಗೋದು.ಅವೇ ಇಲ್ಲದಿದ್ದರೆ ಎಂದು ಲೆಕ್ಕ ಹಾಕಿದ ಚಾಲಾಕಿ ಕಳ್ಳರು ಅವು ಕೆಲಸ ಮಾಡದಂತೆ ಬ್ಯಾಟರಿಗಳನ್ನೇ ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ.

ಮೈಸೂರಿನ ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ, ಯುಪಿಎಸ್ ಕಳುವು ಮಾಡಲಾಗಿದೆ.

ಪೊಲೀಸ್ ಬಡಾವಣೆ, ಚಿಕ್ಕಳ್ಳಿ ಸಮೀಪದ ದೊಡ್ಡ ಆಲದಮರದ ಬಳಿ ಕಳ್ಳತನ ಮಾಡಲಾಗಿದೆ.

ಹಾರೆಯಿಂದ ಬಾಕ್ಸ್ ತೆರೆದು ಯುಪಿಎಸ್ ಇನ್ವರ್ಟರ್, ಬ್ಯಾಟರಿಯನ್ನ  ಕಳುವು‌ಮಾಡಲಾಗಿದೆ.

ಎರಡೂ ಸ್ಥಳಗಳಲ್ಲಿ ಅರ್ಧ ಗಂಟೆ ಅವಧಿಯೊಳಗೆ ಕಳ್ಳರು ಈ ಕೃತ್ಯವೆಸಗಿದ್ದಾರೆ.

ತಾವು ಬಂದಿದ್ದ ವಾಹನವನ್ನ ದೂರದಲ್ಲಿ ನಿಲ್ಲಿಸಿ ಕ್ಯಾಮೆರಾ ದೃಷ್ಟಿ ತಮ್ಮ ಮೇಲೆ ಬೀಳದಂತೆ ಮಾಡಿ ಕಳ್ಳತನ ಮಾಡಿದ್ದಾರೆ ಚಾಲಾಕಿ ಕಳ್ಳರು.

ಕಳೆದ ಎರಡು ತಿಂಗಳ ಹಿಂದಷ್ಟೇ ದುಬಾರಿ ಬೆಲೆಯ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ರಿಂಗ್ ರಸ್ತೆಯಲ್ಲಿ ಕಳೆದ ಒಂದು ತಿಂಗಳಿಂದ ಬೀದಿ ದೀಪಗಳ ಸಂಪರ್ಕ ಸ್ಥಗಿತವಾಗಿದೆ.

ರಿಂಗ್ ರಸ್ತೆಯ ಬೀದಿ ದೀಪಗಳ ನಿರ್ವಹಣೆಯ ಹೊಣೆ ನಗರ ಪಾಲಿಕೆಗೆ ಸೇರಿದ್ದು ಆದರೆ ಇದುವರೆಗೆ ಬೀದಿದೀಪ ಹಾಕಬೇಕಿದೆ

ಆಲನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.