ಮೈಸೂರು: ಕಾಲ್ ಗರ್ಲ್ ಗಳನ್ನ ಸರಬರಾಜು ಮಾಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 14.48 ಲಕ್ಷ ರೂ ವಂಚಿಸಿರುವ ಘಟನೆ ನಡೆದಿದೆ.
ನಂಜನಗೂಡು ತಾಲೂಕು ಹದಿನಾರು ಗ್ರಾಮದ ಸ್ವಾಮಿ(32) ವಂಚನೆಗೆ ಒಳಗಾದವರು.
ಫೇಸ್ ಬುಕ್ ನಲ್ಲಿ ಬಂದ ಮೆಸೇಜ್ ಗಳನ್ನು ನಂಬಿದ ಸ್ವಾಮಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.
ಪಲ್ಲವಿ ಎಂಬ ಹೆಸರಿನಲ್ಲಿ ಯುವತಿ ಸ್ವಾಮಿ ಅವರನ್ನು ಫೇಸ್ ಬುಕ್ ನಲ್ಲಿ ಪರಿಚಯಿಸಿಕೊಂಡು
ಕಾಲ್ ಗರ್ಲ್ ಸೇವೆ ಒದಗಿಸುವುದಾಗಿ ಚಾಟ್ ಮಾಡಿ ನಂಬಿಸಿದ್ದಾರೆ.
ಯುವತಿಯ ಚಾಟ್ ಗಳು ಮತ್ತು ಆಡಿಯೋ ಸಂಭಾಷಣೆಯನ್ನ ನಂಬಿದ ಸ್ವಾಮಿ ಹಂತಹಂತವಾಗಿ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದಾರೆ.
24-01-2023 ರಿಂದ 25-05-2023 ರವರೆಗೆ ಹಂತಹಂತವಾಗಿ ಒಟ್ಟು 14,48,500 ರೂ ಕಳುಹಿಸಿದ್ದಾರೆ.
ಪಲ್ಲವಿ,ಅಂಜಲಿ,ಸುಮಾ,ಸ್ನೇಹ ಎಂಬ ಹೆಸರಿನಲ್ಲಿ ಸ್ವಾಮಿ ಜೊತೆ ಮಾತನಾಡಿದ್ದಾರೆ. ಆಮಿಷಕ್ಕೆ ಗುರಿಯಾದ ಸ್ವಾಮಿ 14.48 ಲಕ್ಷ ಕಳೆದುಕೊಂಡಿದ್ದಾರೆ.
ಅಪರಿಚಿತ ವ್ಯಕ್ತಿಗಳ ವಿರುದ್ದ ಸೆನ್ ಠಾಣೆಗೆ ಸ್ವಾಮಿ ದೂರು ನೀಡಿದ್ದಾರೆ.
ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಅವರು ಮನವಿ ಮಾಡಿದ್ದಾರೆ.