ಹುಣಸೂರಿನಲ್ಲಿ ಇಬ್ಬರ ಹತ್ಯೆ

ಹುಣಸೂರು: ಹುಣಸೂರಿನಲ್ಲಿ ಇಬ್ಬರು‌ ವ್ಯಕ್ತಿಗಳನ್ನು‌ ಭೀಕರವಾಗಿ ಹತ್ಯೆ ಮಾಡಿದ್ದು,ಇಡೀ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.

ನಗರದ ಬೋಟಿ ಬಜಾರ್ ರಸ್ತೆಯ ಪರಸಯ್ಯ ಛತ್ರ ಪಕ್ಕದ ಎಸ್.ಎಸ್ ಸಾಮಿಲ್ ಬಳಿ ಅಲ್ಲಿನ ವಾಚ್ಮನ್ ಹಾಗೂ ಮತ್ತೊಬ್ಬ ಬುದ್ದಿಮಂದ್ಯಾ ವ್ಯಕ್ತಿ

ಅವರಿಬ್ಬರ  ತಲೆ ಮೇಲೆ ಭಾರವಾದ ವಸ್ತು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ನಗರದ ಕಲ್ಕುಣಿಕೆ ರಂಗನಾಥ ಬಡಾವಣೆಯ ವಾಚ್ಮನ್ ವೆಂಕಟೇಶ್ (75)ಹಾಗೂ ಮತ್ತೊಬ್ಬರು ಷಣ್ಮುಖ (65) ಹತ್ಯೆಯಾದವರು.

ವೆಂಕಟೇಶ್ ಇದೇ ಸಾಮಿಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಷಣ್ಮುಖ ಸಣ್ಣ, ಪುಟ್ಟ ಕೆಲಸ ಮಾಡುತ್ತ ಇದೆ ಮಿಲ್ ಬಳಿ ಮಲಗುತ್ತಿದರು.

ಬೆಲೆಬಾಳುವ ಮರ ಕದಿಯಲು ಬಂದು ಈ ಹತ್ಯೆ ಮಾಡಿರಬಹುದು‌ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಶ್ವಾನ ದಳದೊಂದಿಗೆ ಪೊಲೀಸರು ಬಂದು ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಹಿಂದೆ ಕೂಡ ಇಲ್ಲಿನ ಪಕ್ಕದ ಸಾಮಿಲ್ನಲ್ಲಿ ಇದೆ ರೀತಿ ವಾಚ್ಮನ್ ಹತ್ಯೆಯಾಗಿತ್ತು.