ತನ್ನ ಮಕ್ಕಳನ್ನೇ ಸುತ್ತಿಗೆಯಿಂದ ಹತ್ಯೆ ಮಾಡಿದ ಪಾಪಿ ತಂದೆ

ಮಂಡ್ಯ: ಅದೇನು ಕಾರಣವೋ ಪಾಪಿ  ತಂದೆಯೊಬ್ಬ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮದಲ್ಲಿ ನಡೆದಿದೆ.

ಆದಿತ್ಯ(3) ಹಾಗೂ ಅಮೂಲ್ಯ(4)  ಹತ್ಯೆಯಾದ ಮಕ್ಕಳು.

ಶ್ರೀಕಾಂತ್ ಎಂಬ ವ್ಯಕ್ತಿ ಇನ್ನೂ ತೊದಲು ನುಡಿಯಾಡುವ‌ ತನ್ನ ಮಕ್ಕಳನ್ನೇ ಕೊಂದಿದ್ದಾನೆ, ಅಲ್ಲದೇ  ಪತ್ನಿ ಲಕ್ಷ್ಮೀಗೂ ಥಳಿಸಿದ್ದು ಆಕೆ ಲಕ್ಷ್ಮೀಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ ಜಿಲ್ಲೆ ಜೇವರ್ಗಿಯಿಂದ ಬಂದು ಮರಳಗಾಲದ ಆಲೆಮನೆಯಲ್ಲಿ ಈ ಕುಟುಂಬ ಕೆಲಸ ಮಾಡುತ್ತಿತ್ತು.

ಗುರುವಾರ ಮುಂಜಾನೆ 4 ಗಂಟೆ ವೇಳೆ ಮಕ್ಕಳನ್ನು ಕೊಂದು ಪತ್ನಿ ಮೇಲೆ ಹಲ್ಲೆ ನಡೆಸಿ ಶ್ರೀಕಾಂತ್ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ  ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.