ಒಂದೆ ಕುಟುಂಬದ ಮೂವರು ನೇಣಿಗೆ ಶರಣು

ಚಾಮರಾಜನಗರ: ಗಂಡ-ಹೆಂಡತಿ ಹಾಗೂ ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದ ಮಹಾದೇವಸ್ವಾಮಿ(42) ಪತ್ನಿ ಸವಿತಾ(33) ಹಾಗೂ ಮಗಳು ಸಿಂಚನಾ(15) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಈ ದುರ್ಘಟನೆ ನಡೆದಿದ್ದು ಸ್ಥಳದಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.

ಡೆತ್ ನೋಟ್ ನಲ್ಲಿ ಮೃತನ ಅಕ್ಕ-ತಂಗಿಯರ ಹೆಸರು ಬರೆದಿದ್ದು ಇವರಿಗೆಲ್ಲಾ ಶಿಕ್ಷೆ ಆಗಬೇಕೆಂದು ಕೋರಿಕೊಂಡಿದ್ದಾರೆ.

ಮಹಾದೇವಸ್ವಾಮಿ ಮೂಲತಃ ಕೃಷಿಕರಾಗಿದ್ದು ಸವಿತಾ ಟೈಲರಿಂಗ್ ಮಾಡುತ್ತಿದ್ದರು, ಇವರಿಗೆ ಇಬ್ಬರು ಪುತ್ರಿಯರಿದ್ದು ಒಬ್ಬರು ಪುತ್ರಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು ಅಜ್ಜಿಯ ಮನೆಯಲ್ಲಿದ್ದಾರೆ.

ಕಿರಿಯ ಮಗಳು ಸಿಂಚನಾ 9 ನೇ ತರಗತಿ ಓದುತ್ತಿದ್ದು ಅಪ್ಪ-ಅಮ್ಮನ ಜೊತೆ ಇದ್ದಳು‌.

ಮೂವರು ಆತ್ಮಹತ್ಯೆ ವಿಷಯ ಗೊತ್ತಾಗುತ್ತಿದ್ದಂತೆ ಗ್ರಾಮದ ಜನತೆ ಬೆಚ್ಚಿ ಬಿದ್ದಿದೆ.

ಮೇಲ್ನೋಟಕ್ಕೆ ಹೆಂಡತಿ, ಮಗಳು ಮೊದಲು ಸಾವಿಗೆ ಶರಣಾಗಿದ್ದು ಅದಾದ ಬಳಿಕ ಮಾಹದೇವಸ್ವಾಮಿ ನೇಣು ಹಾಕಿಕೊಂಡಿದ್ದಾರೆ

ಜಮೀನು ವಿವಾದದಿಂದ ಕೌಟುಂಬಿಕ ಕಲಹವಾಗಿ ಸಾವಿಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ‌.

ಸ್ಥಳಕ್ಕೆ ಜಿಲ್ಲಾ ಎಸ್ಪಿ ಪದ್ಮನಿ ಸಾಹು ಭೇಟಿ ನೀಡಿ ಪರಿಶೀಲಿಸಿದರು. ತನಿಖೆ ನಂತರವೆ ನಿಖರ ಕಾರಣ ತಿಳಿಯಬೇಕಿದೆ.