ಕಾರ್ ಚಕ್ರಗಳನ್ನೇ ದೋಚಿದ ಚಾಲಾಕಿ ಕಳ್ಳರು

ಮೈಸೂರು: ಕಾರು‌ ಕಳವು ಮಾಡಿದರೆ ಸಿಕ್ಕಿಬೀಳಬೇಕಾಗುತ್ತದೆ ಆದರೆ ಕಾರಿನ ಚಕ್ರಗಳನ್ನ ಕದ್ದರೆ ಸಿಕ್ಕಿಬೀಳಲು ಸಾಧ್ಯವಿಲ್ಲ ಎಂದುಕೊಂಡ ಚಾಲಾಕಿ ಕಳ್ಳರು ಕಾರ್ ನ ಎಲ್ಲಾ‌ ಚಕ್ರಗಳನ್ನು ಕದ್ದೊಯ್ದಿರುವ ಘಟನೆ ‌ಮೈಸೂರಲ್ಲಿ ನಡೆದಿದೆ

ಕಾರಿನ ಚಕ್ರಗಳನ್ನು ಕಳವು ಮಾಡಿರುವ ಘಟನೆ ನಗರದ ಪೊಲೀಸ್ ಬಡಾವಣೆ ಎರಡನೇ ಹಂತ ( ಸರ್ದಾರ್ ವಲ್ಲಭಭಾಯಿ ಪಟೇಲ್ ‌ನಗರ) ದಿಲ್ಲಿ ನಡೆದಿದೆ.

ಬಡಾವಣೆಯ ತಿರುಮಲ ಪಬ್ಲಿಕ್ ಶಾಲೆ ಸಮೀಪದ ನಿವಾಸಿ ಕುಬೇರ ಸ್ವಾಮಿ ಅವರ ಕಾರಿನ ನಾಲ್ಕು ಚಕ್ರಗಳನ್ನು ರಾತ್ರಿ ಕಳ್ಳರು ಕಿತ್ತು ಒಯ್ದಿದ್ದಾರೆ.

ಈ ಬಡಾವಣೆಯಲ್ಲಿ ಇದು ಮೂರನೇ ಘಟನೆ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪದೇ,ಪದೇ‌ ಇಂತಹ ಘಟನೆ ನಡೆಯುತ್ತಿರುವುದರಿಂದ ಮನೆ ಮುಂದೆ ಕಾರು ಪಾರ್ಕ್ ಮಾಡುವುದು‌ ಹೇಗೆ ಎಂಬ ಚಿಂತೆ ಪೊಲೀಸ್ ಬಡಾವಣೆಯ ಜನರನ್ನು ಕಾಡುತ್ತಿದೆ.

ಪೊಲೀಸರು ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.