ರೌಡಿಗಳ ಪೆರೇಡ್ ಮಾಡಿ ಕಠಿಣ ಎಚ್ಚರಿಕೆ ನೀಡಿದ ಪೊಲೀಸ್ ಅಧಿಕಾರಿಗಳು

ಮೈಸೂರು: ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ‌ ನೀಡಬಾರದು,ಕಾನೂನುಬಾಹಿರ‌ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ರೌಡಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕಠಿಣ ಎಚ್ಚರಿಕೆ ನೀಡಿದರು.

ದೇವರಾಜ ಉಪ ವಿಭಾಗದ ಆಲನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ರೌಡಿಗಳಿಗೆ ಬಿಸಿ‌ ಮುಟ್ಟಿಸಿದರು.

ಉದಯಗಿರಿ, ದೇವರಾಜ, ಲಷ್ಕರ್, ಅಲನಹಳ್ಳಿ, ನಜರ್ಬಾದ್ ಠಾಣೆಗಳ ಎಲ್ಲ ರೌಡಿ ಆಸಾಮಿಗಳನ್ನ ಠಾಣೆಗೆ ಕರೆಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಅಧಿಕಾರಿಗಳು ಸೂಚಿಸಿದರು.

ಸಮಾಜದಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ರೌಡಿಗಳ ಪರೇಡ್ ನಡೆಸಲಾಯಿತು.

ನೂತನ ಗೃಹ ಸಚಿವ ಡಾ.ಜಿ ಪರಮೇಶ್ವರ್  ಹಾಗೂ ನೂತನ ಡಿಜಿ & ಐ ಜಿ ಪಿ ಅಲೋಕ್ ಮೋಹನ್ ರವರ ಆದೇಶದಂತೆ  ದೇವರಾಜ ಉಪವಿಭಾಗದ ವತಿಯಿಂದ ರೌಡಿಪೆರೇಡ್ ನಡೆಸಲಾಗಿದೆ.

ಈ ವೇಳೆ ದೇವರಾಜ ವಿಭಾಗದಲ್ಲಿನ ಎಸಿಪಿ ಶಾಂತಮಲ್ಲಪ್ಪ ಅವರು ಮಾತನಾಡಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದರು.

ಹಾಗಗೊಂದು ವೇಳೆ ಭಾಗಿಯಾದಲ್ಲಿ ಗೂಂಡಾ ಕಾಯ್ದೆ ಯಂತಹ ಕಾನೂನು ಬಳಸಿ ಹತ್ತಿಕ್ಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೌಡಿ ಚಟುವಟಿಕೆ ಬಿಟ್ಟು ಎಲ್ಲರೂ ಸನ್ನಡತೆ ಯಿಂದ ಬಾಳುವಂತೆ ತಿಳುವಳಿಕೆ ನೀಡಿದರು.ಪೊಲೀಸ್ ಇನ್ಸ್ ಪೆಕ್ಟ್ ರ್ ಗಳಾದ ಪಿ. ಪಿ ಸಂತೋಷ್, ಜೀವನ್, ಪಿ. ಕೆ. ರಾಜು, ಟಿ. ಬಿ ಶಿವಕುಮಾರ್ ಹಾಗೂ ವಿಭಾಗದ ಎಲ್ಲ ಪಿ ಎಸ್ ಐ ಗಳು ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.