ಮೈಸೂರು: ಇದೇ ಜೂನ್ 29 ರಂದು ಬಕ್ರೀದ್ ಹಬ್ಬ ಇರುವುದರಿಂದ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ರವರು ತಮ್ಮ ಕಚೇರಿಯಲ್ಲಿ ಶಾಂತಿ ಸಭೆ ನಡೆಸಿದರು.
ಹಿಂದು ಹಾಗೂ ಮುಸ್ಲಿಂ ಜನಾಂಗದ ಮುಖಂಡರೊಂದಿಗೆ ಆಯುಕ್ತರು ಚರ್ಚಿಸಿದರು.
ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸಗಳಿಗೆ ಆಸ್ಪದ ನೀಡಬಾರದೆಂದು ಬಿ.ರಮೇಶ್ ಸಲಹೆ ನೀಡಿದರು.
ಪ್ರಾರ್ಥನಾ ಸ್ಥಳಗಳ ಬಳಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು,ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಆಯುಕ್ತರು ಮನವಿ ಮಾಡಿದರು.
ಸಭೆಯಲ್ಲಿ ಡಿಸಿಪಿ ಗಳಾದ ಮುತ್ತುರಾಜ್ ಹಾಗೂ ಜಾಹ್ನವಿ,ನಗರ ಪಾಲಿಕೆ ಸದಸ್ಯರು,ವಿವಿದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.