ಲೋಕಾ ಬಲೆಗೆ ಕಂದಾಯ ಅದಿಕಾರಿ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ : ನಗರಸಭೆಯ ಕಂದಾಯ ಅದಿಕಾರಿಯೊಬ್ಬರು ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿದ್ದಾರೆ.

ಚಾಮರಾಜನಗರ ನಗರಸಬಾ ಕಂದಾಯ ಅದಿಕಾರಿ ನಾರಾಯಣ್ ಎಂಬುವವರೆ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ‌

ಚಾಮರಾಜನಗರ ಸ್ಥಳೀಯ ನಿವಾಸಿಯೊಬ್ಬರಿಗೆ ಎರಡು ನಿವೇಶನಗಳಿದ್ದು ಈ ಎರಡೂ ನಿವೇಶನಗಳನ್ನ ಒಟ್ಟುಗೂಡಿಸಿ ಖಾತೆ ಮಾಡಲು ಅರ್ಜಿ ನೀಡಿದ್ದರು. ಖಾತೆ ಮಾಡಲು ೨೫-೩೦ ದಿನಗಳಾದರೂ ಕೆಲಸವಾಗಿರಲಿಲ್ಲ. ಈ ನಡುವೆ ಅದಿಕಾರಿ ನಾರಾಯಣ್ ದೂರುದಾರರ ೨೫ ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ದೂರುದಾರ ಅಷ್ಟೊಂದು ಹಣ ಒದಗಿಸದ್ದರಿಂದ ಅದಿಕಾರಿ ಹಾಗೂ ದೂರುದಾರರ ನಡುವೆ ಚೌಕಾಸಿ ನಡೆದು ೨೦ ಸಾವಿರ ಅಂತಿಮಗೊಳಿಸಿದ್ದನು. ಇಂದು ಅದಿಕಾರಿಯ ತಮ್ಮ ಮನೆಯಲ್ಲಿ ಮಾತುಕತೆಯಾಡಿ ಹಣ ಸ್ವೀಕರಿಸಿದ್ದಾರೆ.

ಮನೆಯಲ್ಲಿ ಸ್ವೀಕರಿಸಿ ನಂತರ ನಗರಸಬಾ ಕಚೇರಿಗೆ ಬಂದ ನಂತರ ಅಧಿಕಾರಿಗಳು ಅವರ ಇಲಾಖಾ ಕಾರ್ಯಗಳನ್ನ ಕೈಗೊಂಡಿಧ್ದಾರೆ.

ಡಿ ವೈಎಸ್ ಪಿ ಮ್ಯಾಥ್ಯಸ್ ಅವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಶಶಿಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.

ನಗರಸಬಾ ಕಾರ್ಯಾಲದಲ್ಲಿ ವ್ಯಾಪಕವಾಗಿ ಲಂಚದ ಬೇಡಿಕೆ ದೂರುಗಳು ಆಗಾಗ ಕೇಳಿಬರುತ್ತಿದ್ದ ಇಂಜಿನಿಯರೊಬ್ಬರು ವರ್ಷದ ಹಿಂದೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ನಂತರ ಕರ್ತವ್ಯ ವಿಳಂಬ ಭ್ರಷ್ಟತೆ ಹಿನ್ನಲೆಯಲ್ಲಿ ಜಿಲ್ಲಾದಿಕಾರಿ ಚಾರುಲತಾ ಸೋಮಾಲ್ ಇಬ್ಬರನ್ನ ಅಮಾನತು ಮಾಡಿದ್ದರು ನಂತರ ಇದೀಗ ಕಂದಾಯ ಅದಿಕಾರಿ ಬಲೆಗೆ ಬಿದ್ದಿದ್ದಾರೆ.
ಖಾತೆ ಕಂದಾಯ ಮಾಡಿಸಲು ಮದ್ಯವರ್ತಿಗಳದ್ದೆ ದರ್ಬಾರಾಗಿದ್ದು ದಲ್ಲಾಳಿ ಇಲ್ಲದೆ ಯಾವ್ದೆ ಕೆಲಸ ಮಾಡದೆ ಲೋಪವೆಸಗುತ್ತಿಧ್ದಾರೆ‌.